ಅಲ್ ಅಖ್ಸಾ ಮಸೀದಿಗೆ ನುಗ್ಗಿದ ಇಸ್ರೇಲಿಯನ್ನರು: ಸೌದಿ ಖಂಡನೆ
ರಿಯಾದ್, ಆ.7: ಜೆರುಸಲೇಂನ ಅಲ್-ಅಖ್ಸಾ ಮಸೀದಿಯ ಆವರಣಕ್ಕೆ ಇಸ್ರೇಲ್ ವಸಾಹತುಗಾರರು ನುಗ್ಗಿ ಮಸೀದಿಯ ಪವಿತ್ರತೆಯನ್ನು ಉಲ್ಲಂಘಿಸಿದ್ದಾರೆ ಎಂದು ತೀವ್ರವಾಗಿ ಖಂಡಿಸಿರುವ ಸೌದಿ ಅರೆಬಿಯಾ, ಇದು ಅಂತರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
ಗಾಝಾ ಪಟ್ಟಿಯಲ್ಲಿನ ಉಲ್ಬಣವನ್ನು ಕೊನೆಗೊಳಿಸಿ ಪೆಲೆಸ್ತೀನ್ ನಾಗರಿಕರಿಗೆ ಅಗತ್ಯವಿರುವ ಭದ್ರತೆಯನ್ನು ಒದಗಿಸುವಂತೆ ಸೌದಿಯ ವಿದೇಶಾಂಗ ಇಲಾಖೆ ಅಂತರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿದೆ. ಜೋರ್ಡಾನ್, ಖತರ್ ದೇಶಗಳೂ ಇಸ್ರೇಲ್ ವಸಾಹತುಗಾರರ ಕೃತ್ಯವನ್ನು ತೀವ್ರವಾಗಿ ಖಂಡಿಸಿವೆ.
Next Story