varthabharthi


ನಿಧನ

ನಿಧನ: ಹಾಜಿ ಬೈಕಾಡಿ ಇಸ್ಮಾಯಿಲ್ ಸಾಹೇಬ್

ವಾರ್ತಾ ಭಾರತಿ : 9 Aug, 2022

ಹೂಡೆ (ಉಡುಪಿ): ಬೈಕಾಡಿ ಕುಟುಂಬದ ಮುಖ್ಯಸ್ಥ, ತೋನ್ಸೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಜಿ ಬೈಕಾಡಿ ಇಸ್ಮಾಯಿಲ್ ಸಾಹೇಬ್‌ (97) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. 

ಖದೀಮ್ ಜಾಮಿಯಾ ಮಸೀದಿ ಹೂಡೆ ಇದರ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು, ದಾರುಸ್ಸಲಾಂ ಶಿಕ್ಷಣ ಸಂಸ್ಥೆ  ಹಾಗೂ ಸರಕಾರಿ ಉರ್ದು ಶಾಲೆ ಹೂಡೆ ಇದರ ಏಳಿಗೆಗಾಗಿ ದುಡಿದಿದ್ದರು.

ಅವರು ಪತ್ನಿ, ಹೂಡೆ ತೋನ್ಸೆ ಹೆಲ್ತ್ ಸೆಂಟರ್ ಮಾಲೀಕರಾದ ಬಿ.ಎಂ.ಜಾಫರ್ ಸೇರಿದಂತೆ ಮೂವರು ಪುತ್ರರು ಮತ್ತು 2 ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ಇವರ ಅಂತ್ಯಕ್ರಿಯೆಯು ಹೂಡೆ ತೋನ್ಸೆಯ ಖಾದೀಮ್ ಜಾಮಿಯಾ ಮಸೀದಿಯಲ್ಲಿ ಲುಹರ್ ನಮಾಝಿನ ಬಳಿಕ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)