varthabharthi


ರಾಷ್ಟ್ರೀಯ

ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರರಾದ ಕಾಂಗ್ರೆಸ್ ಸಂಸದ ಶಶಿ ತರೂರ್

ವಾರ್ತಾ ಭಾರತಿ : 11 Aug, 2022

Photo:twitter

ಹೊಸದಿಲ್ಲಿ: ಕಾಂಗ್ರೆಸ್ ಸಂಸದ ಹಾಗೂ  ವಾಗ್ಮಿ ಶಶಿ ತರೂರ್ (ShashiTharoor) ಅವರು ತಮ್ಮ ಬರಹಗಳು ಮತ್ತು ಭಾಷಣಗಳಿಗಾಗಿ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಗೌರವವಾದ ಚೆವಲಿಯರ್ ಡೆ ಲಾ ಲೀಜನ್ ಡಿ'ಹಾನರ್ (ದಿ ಲೀಜನ್ ಆಫ್ ಆನರ್) ಗೆ ಪಾತ್ರರಾಗಿದ್ದಾರೆ.

1802 ರಲ್ಲಿ ನೆಪೋಲಿಯನ್ ಬೋನಪಾರ್ಟೆ ಸ್ಥಾಪಿಸಿದ ಫ್ರೆಂಚ್ ಆರ್ಡರ್ ಆಫ್ ಮೆರಿಟ್ ಅನ್ನು ಅತ್ಯುತ್ತಮ ನಾಗರಿಕ ಅಥವಾ ಮಿಲಿಟರಿ ನಡವಳಿಕೆಗಾಗಿ ನೀಡಲಾಗುತ್ತದೆ.

ಟ್ವಿಟರ್‌ನಲ್ಲಿ ಅಭಿನಂದನೆಗಳು ಹರಿದುಬರುತ್ತಿದ್ದಂತೆ ಪ್ರತಿಕ್ರಿಯಿಸಿದ  ತರೂರ್, “ಫ್ರಾನ್ಸ್‌ನೊಂದಿಗಿನ ನಮ್ಮ ಸಂಬಂಧವನ್ನು ಗೌರವಿಸುವ, ಭಾಷೆಯನ್ನು ಪ್ರೀತಿಸುವ ಹಾಗೂ  ಸಂಸ್ಕೃತಿಯನ್ನು ಮೆಚ್ಚುವವನಾಗಿ, ನಾನು ಈ ರೀತಿಯಲ್ಲಿ ಗುರುತಿಸಿಕೊಂಡಿರುವುದು ನನಗೆ ಗೌರವವಾಗಿದೆ. ನನಗೆ ಈ ಗೌರವವನ್ನು ನೀಡಲು ಸೂಕ್ತವೆಂದು ಕಂಡವರಿಗೆ ನನ್ನ ಕೃತಜ್ಞತೆ ಮತ್ತು ಮೆಚ್ಚುಗೆಗಳು”ಎಂದು ಟ್ವೀಟಿಸಿದ್ದಾರೆ.

2010 ರಲ್ಲಿ ತರೂರ್ ಅವರು ಸ್ಪೇನ್ ಸರಕಾರದಿಂದ ಇದೇ ರೀತಿಯ ಗೌರವವನ್ನು ಪಡೆದಿದ್ದರು.  ಸ್ಪೇನ್ ರಾಜನು ಅವರಿಗೆ ಎನ್ಕೊಮಿಯೆಂಡಾ ಡೆ ಲಾ ರಿಯಲ್ ಆರ್ಡರ್ ಎಸ್ಪಾನೊಲಾ ಡಿ ಕಾರ್ಲೋಸ್ III ಅನ್ನು ನೀಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)