varthabharthi


ಬೆಂಗಳೂರು

ಬೆಂಗಳೂರು | ಬೇಡಿಕೆ ಈಡೇರಿಸುವ ಭರವಸೆ ಹಿನ್ನೆಲೆ: 2 ದಿನಗಳಿಂದ ನಡೆಯುತ್ತಿದ್ದ ದಾಸೋಹ ನೌಕರರ ಧರಣಿ ವಾಪಸ್

ವಾರ್ತಾ ಭಾರತಿ : 17 Aug, 2022

ಬೆಂಗಳೂರು, ಆ.17: ಅಕ್ಷರ ದಾಸೋಹ ನೌಕರರಿಗೆ ನಿವೃತ್ತಿ ಭದ್ರತೆಯಾಗಿ 1 ಲಕ್ಷ ರೂ. ನೀಡಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳಿಗೆ ರಾಜ್ಯ ಸರಕಾರ ಈಡೇರಿಸಿರುವ ಭರವಸೆ ನೀಡಿರುವ ಹಿನ್ನೆಲೆ ಎರಡು ದಿನಗಳಿಂದ ನಡೆಯುತ್ತಿದ್ದ ಧರಣಿಯನ್ನು ಅಕ್ಷರ ದಾಸೋಹ ನೌಕರರು ಹಿಂಪಡೆದರು.

ಬುಧವಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ(ಸಿಐಟಿಯು) ಅಧ್ಯಕ್ಷೆ ವರಲಕ್ಷ್ಮೀ ಸೇರಿದಂತೆ ಹಲವು ಹೋರಾಟಗಾರರು ಪಾಲ್ಗೊಂಡು, ತಮ್ಮ ಬೇಡಿಕೆಗಳನ್ನು ಮಂಡಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವರಲಕ್ಷ್ಮೀ, ಅಕ್ಷರ ದಾಸೋಹ ನೌಕರರಿಗೆ ನಿವೃತ್ತಿ ಭದ್ರತೆಯಾಗಿ 1 ಲಕ್ಷ ರೂ. ನೀಡಬೇಕು ಬೇಡಿಕೆಗೆ ರಾಜ್ಯ ಸರಕಾರ ಸ್ಪಂದಿಸಿದ್ದು, ಈ ಬಗ್ಗೆ ಹಣಕಾಸು ಇಲಾಖೆಗೆ ಶಿಫಾರಸ್ಸು ಮಾಡಲಾಗುವುದೆಂದು ತಿಳಿಸಿದ್ದಾರೆ. ಹಾಗಾಗಿ, ಸದ್ಯ ಧರಣಿಯನ್ನು ಹಿಂಪಡೆಯಲಾಗಿದೆ ಎಂದು ಹೇಳಿದರು.

ಅದೇ ರೀತಿ, ಅದೇ ರೀತಿ, ಬಜೆಟ್‍ನಲ್ಲಿ ಘೋಷಣೆ ಮಾಡಿರುವಂತೆ 1 ಸಾವಿರ ರೂ.ಗಳನ್ನು ಮಾರ್ಚ್‍ನಿಂದಲೇ ನೀಡಬೇಕು ಎನ್ನುವ ಬೇಡಿಕೆಯೂ ಈಡೇರಿಸಲಾಗುವುದೆಂದು ತಿಳಿಸಲಾಗಿದೆ ಎಂದ ಅವರು, ನೌಕರರ ಕೊಂದು ಕೊರೆತೆ ಆಲಿಸಲು ಸಭೆಗಳನ್ನು ನಡೆಸಲು ಇಲಾಖೆ ಮುಂದಾಗಿದೆ.ಹೀಗಾಗಿ, ಹಲವು ಬೇಡಿಕೆಗಳನ್ನು 15 ದಿನದೊಳಗೆ ಈಡೇರಿಸುವ ಭರವಸೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ ► ಮಡಿಕೇರಿ | ತಲ್ತರೆಶೆಟ್ಟಳ್ಳಿಯ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ: ಆರೋಪ 

ಅಹೋರಾತ್ರಿ: ಅಕ್ಷರದಾಸೋಹ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ 60 ವರ್ಷ ತುಂಬಿದ ನೌಕರರನ್ನು ಅವಮಾನವೀಯವಾಗಿ ಕೆಲಸದಿಂದ ಬಿಡುಗಡೆಗೊಳಿಸುತ್ತಿರುವ ಸರಕಾರದ ಆದೇಶದ ವಿರುದ್ಧ ನೌಕರರು ಅಹೋರಾತ್ರಿ ಧರಣಿ ನಡೆಸಿದರು.

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು) ನೇತೃತ್ವದಲ್ಲಿ ಜಮಾಯಿಸಿದ ಮಹಿಳಾ ನೌಕರರು ಫ್ರೀಡಂ ಪಾರ್ಕಿನ ಮೈದಾನದಲ್ಲಿ ಮಂಗಳವಾರ ಇಡೀ ರಾತ್ರಿ ಕಳೆದರು.

ಬುಧವಾರ ಮುಂಜಾನೆ ಸರಕಾರದ ವಿರುದ್ಧ ಘೋಷಣೆ ಕೂಗುತ್ತ ಹೋರಾಟ ಆರಂಭಿದ ನೌಕರರು, ನಿನ್ನೆಯಿಂದ ಹೋರಾಟ ನಡೆಸುತ್ತಿದ್ದರು ಸಮಸ್ಯೆ ಆಲಿಸದ ಇಲಾಖೆಗೆ ನಾಚಿಗೆ ಆಗಬೇಕು. ನಿನ್ನೆಯಿಂದ ಇಲ್ಲಿದ್ದೇವೆ ಯಾರು ಬಂದಿಲ್ಲ ಅವರಿಗೆ ನಮ್ಮ ಕಷ್ಟ ಕಾಣುತ್ತಿಲ್ಲ. ಆರಾಮವಾಗಿ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ರಾಜ್ಯದಲ್ಲಿ ಬಿಸಿಯೂಟದ ಕಾರ್ಯಕ್ರಮ 2002-03ನೇ ಸಾಲಿನಲ್ಲಿ ಅನುಷ್ಠಾನಗೊಂಡಿದೆ.ಅಂದಿನಿಂದಲೂ ಯಾವುದೇ ವಯಸ್ಸಿನ ನಿಬರ್ಂಧ ಇಲ್ಲದೆ ಅಡುಗೆ ಸಿಬ್ಬಂದಿ ಕನಿಷ್ಠ ಗೌರವಧನ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಸರಕಾರ ಮಾ.5 ರಂದು 60 ವರ್ಷ ದಾಟಿದ ಸಿಬ್ಬಂದಿಯನ್ನು ಸೇವೆಯಿಂದ ಬಿಡುಗಡೆಗೊಳಿಸಲು ಆದೇಶ ಹೊರಡಿಸಿತ್ತು. ಆದೇಶದಂತೆ ಇದೀಗ ಅವಮಾನೀಯವಾಗಿ ಮನೆಗೆ ಕಳುಹಿಸುತ್ತಿದ್ದಾರೆ ಎಂದು ಬೇಸರ ಹೊರಹಾಕಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)