varthabharthi


ಕರ್ನಾಟಕ

ನಾನು ಸಿಎಂ ಅಭ್ಯರ್ಥಿ ಆದ್ರೆ ಬಿಜೆಪಿಗೆ 150 ಸೀಟ್ ಬರುತ್ತೆ: ಶಾಸಕ ಯತ್ನಾಳ್

ವಾರ್ತಾ ಭಾರತಿ : 17 Aug, 2022

ಬೆಂಗಳೂರು, ಆ.17: 'ನಾನು ಮುಂದಿನ ಬಾರಿಯೂ ಶಾಸಕನಾಗುತ್ತೇನೆ. ನನಗೆಲ್ಲಾ ಅರ್ಹತೆ ಇದೆ, ನಾನು ಮುಖ್ಯಮಂತ್ರಿ ಅಭ್ಯರ್ಥಿಯಾದರೆ ಬಿಜೆಪಿಗೆ (BJP) 150 ಸ್ಥಾನ ಸರಳವಾಗಿ ಬರುತ್ತೆ' ಎಂದು ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಚಿವ ಶ್ರೀರಾಮುಲು ಮತ್ತು ಮಾಧುಸ್ವಾಮಿ ಅವರ ಹೇಳಿಕೆಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯ ಇಲ್ಲ ಎಂದು ಹೇಳಿದರು. 

'ಶ್ರೀರಾಮುಲು ತಾವು ಮುಖ್ಯಮಂತ್ರಿಯಾಗ್ತೀನಿ ಅಂತ ಬೇಕಾದರೆ ಹೇಳಲಿ, ಆದರೆ ಸಿದ್ದರಾಮಯ್ಯನವರನ್ನು ಬಿಜೆಪಿಗೆ ಕರೆತಂದು ಮುಖ್ಯಮಂತ್ರಿ ಮಾಡುವ ಅಗತ್ಯ ಮತ್ತು ಅನಿವಾರ್ಯತೆ ಇಲ್ಲ, ಆ ಸ್ಥಾನಕ್ಕೆ ನಮ್ಮಲ್ಲೇ ಬೇಕಾದಷ್ಟು ಅಭ್ಯರ್ಥಿಗಳಿದ್ದಾರೆ' ಎಂದು ತಿರುಗೇಟು ನೀಡಿದರು. 

'ಸಿದ್ದರಾಮಯ್ಯ ಸಿಎಂ ಆಗಬೇಕು' ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಚಿವ ಶ್ರೀರಾಮುಲು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)