varthabharthi


ದಕ್ಷಿಣ ಕನ್ನಡ

ಕೊಲೆಯಾದ ಮಸೂದ್, ಫಾಝಿಲ್‌ ಕುಟುಂಬಕ್ಕೆ ʼಮಂಗಳೂರು ಕೇರಳ ಮುಸ್ಲಿಂ ಜಮಾಅತ್ʼ ವತಿಯಿಂದ ಸಹಾಯ ಧನ

ವಾರ್ತಾ ಭಾರತಿ : 17 Aug, 2022

ಮಂಗಳೂರು : ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಕೊಲೆಯಾದ ಮಸೂದ್ ಮತ್ತು ಫಾಝಿಲ್ ಅವರ ಕುಟುಂಬಕ್ಕೆ ಸಾಂತ್ವನ ನೀಡುವ ಪ್ರಯುಕ್ತ ಮಂಗಳೂರು ಕೇರಳ ಮುಸ್ಲಿಂ ಜಮಾಅತ್ ವತಿಯಿಂದ ಸಹಾಯ ಧನವನ್ನು ಮುಸ್ಲಿಂ ಸೆಂಟ್ರಲ್ ಕಮಿಟಿಯ ಪರಿಹಾರ ನಿಧಿಗೆ  ಅದರ ಅಧ್ಯಕ್ಷರಾದ ಹಾಜಿ ಕೆ.ಎಸ್ ಮುಹಮ್ಮದ್ ಮಸೂದ್ ಇವರಿಗೆ ಹಸ್ತಾಂತರಿಸಲಾಯಿತು.

ಸಭೆಯಲ್ಲಿ ಮಂಗಳೂರು ಕೇರಳ ಮುಸ್ಲಿಂ ಜಮಾತ್ ಅಧ್ಯಕ್ಷರಾದ ಎಮ್.ಅಬ್ದುಲ್ಲ ಕುಂಞಿ, ಉಪಾಧ್ಯಕ್ಷರಾದ ಇಸ್ಮಾಯಿಲ್ ಸೋನಾ ಬಝಾರ್, ಜನರಲ್ ಸೆಕ್ರೆಟರಿ ಪಿ.ವಿ.ಮುಹಮ್ಮದ್ ಆಲಿ, ಜೊತೆ ಕಾರ್ಯದರ್ಶಿ ಅಬ್ದುಲ್ ಗಫೂರ್ ಮತ್ತು ಮುಸ್ಲಿಂ ಸೆಂಟರ್ ಕಮಿಟಿಯು ಉಪಾಧ್ಯಕ್ಷರಾದ ಕೆ.ಅಶ್ರಫ್, ಹಾಜಿ ಇಬ್ರಾಹಿಂ ಕೋಡಿಜಾಲ್, ಪುತ್ತು ಬಾವ ಹಾಜಿ, ಇಮ್ತಿಯಾಝ್,‌ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಮತ್ತಿತರ ಸದಸ್ಯರು ಹಾಜರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)