ಆರೆಸ್ಸೆಸ್ ಮತ್ತು ಸಾವರ್ಕರ್‌ರ ಹುಸಿ ದಲಿತ ಪ್ರೇಮ ಮತ್ತು ದೇಶ ಪ್ರೇಮ
ರಾಷ್ಟ್ರವಾದಿಗಳ ಹಲವು ಹುಸಿ ಪ್ರಶ್ನೆಗಳು
ಭಾಗ-2
ಅಂಡಮಾನ್ ಜೈಲಿನಲ್ಲಿದ್ದಾಗಲೇ ಬ್ರಿಟಿಷರ ಆಳ್ವಿಕೆಯನ್ನು ತ್ರಿಕರಣಪೂರ್ವಕವಾಗಿ ಬೆಂಬಲಿಸುತ್ತೇವೆಂದು ಬರೆದುಕೊಟ್ಟ ಮೇಲೆ ಸಾವರ್ಕರ್ ಸಹೋದರರು ತಮ್ಮ ಇಡೀ ರಾಜಕೀಯ ಬದುಕನ್ನು ಸಂಪೂರ್ಣವಾಗಿ ಬ್ರಿಟಿಷರ ಪರವಾಗಿ, ಮುಸ್ಲಿಮರ ವಿರುದ್ಧವಾಗಿ, ಸ್ವಾತಂತ್ರ್ಯ ಹೋರಾಟಕ್ಕೆ ವಿರುದ್ಧವಾಗಿ ಮೀಸಲಾಗಿಟ್ಟರು. 1939ರಲ್ಲಿ ಎರಡನೇ ಮಹಾಯುದ್ಧ ಪ್ರಾರಂಭವಾದಾಗ ಸಾವರ್ಕರ್ ಸಹೋದರರೂ ಹಿಂದೂಗಳನ್ನು ಬ್ರಿಟಿಷ್ ಸೇನೆಯಲ್ಲಿ ಭರ್ತಿ ಮಾಡುತ್ತಾ, ಬ್ರಿಟಿಷ್ ಸಾಮ್ರಾಜ್ಯವನ್ನು ಗಟ್ಟಿಗೊಳಿಸಿದರು. 1942ರಲ್ಲಿ ಇಡೀ ದೇಶ ಬ್ರಿಟಿಷರ ವಿರುದ್ಧ ಬೀದಿಯಲ್ಲಿದ್ದಾಗ ಸಾವರ್ಕರ್ ಮತ್ತವರ ಹಿಂದೂ ಮಹಾಸಭಾ ಬ್ರಿಟಿಷರೊಂದಿಗೆ ಸೇರಿಕೊಂಡು ಸರಕಾರ ರಚಿಸಿತ್ತು. ಸ್ವಾತಂತ್ರ್ಯ ಹೋರಾಟ ಮಾಡುತ್ತಿದ್ದ ಜನರ ಮೇಲೆ ಹಿಂದೂ ಮಹಾಸಭಾ ಸರಕಾರ ಗುಂಡಿನ ಮಳೆ ಸುರಿಸಿ ದಮನ ಮಾಡಿತ್ತು.
ಪ್ರಶ್ನೆ 4: ಸಾವರ್ಕರ್ ಮನೆತನದ ಮೂವರು ಸಹೋದರರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಮತ್ತು ಬೀದಿಗೆ ಬಿದ್ದರು. ಕಾಂಗ್ರೆಸ್‌ನಲ್ಲಿ ಹೀಗೆ ಹೋರಾಡಿದವರುಂಟೆ?
ಸಾವರ್ಕರ್ ಮತ್ತು ಅವರ ಸಹೋದರರು 1911ಕ್ಕೆ ಮುನ್ನ ಅಭಿನವ್ ಭಾರತ್ ಸದಸ್ಯರಾಗಿ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಮತ್ತು ಅಂಡಮಾನ್ ಜೈಲಿಗೆ ತಳ್ಳಲ್ಪಟ್ಟಿದ್ದು ನಿಜ. ಆದರೆ ಅಷ್ಟೇ ನಿಜ. ಅಂಡಮಾನ್ ಜೈಲಿನಲ್ಲಿದ್ದಾಗಲೇ ಬ್ರಿಟಿಷರ ಆಳ್ವಿಕೆಯನ್ನು ತ್ರಿಕರಣಪೂರ್ವಕವಾಗಿ ಬೆಂಬಲಿಸುತ್ತೇವೆಂದು ಬರೆದುಕೊಟ್ಟ ಮೇಲೆ ಸಾವರ್ಕರ್ ಸಹೋದರರು ತಮ್ಮ ಇಡೀ ರಾಜಕೀಯ ಬದುಕನ್ನು ಸಂಪೂರ್ಣವಾಗಿ ಬ್ರಿಟಿಷರ ಪರವಾಗಿ, ಮುಸ್ಲಿಮರ ವಿರುದ್ಧವಾಗಿ, ಸ್ವಾತಂತ್ರ್ಯ ಹೋರಾಟಕ್ಕೆ ವಿರುದ್ಧವಾಗಿ ಮೀಸಲಾಗಿಟ್ಟರು. 1939ರಲ್ಲಿ ಎರಡನೇ ಮಹಾಯುದ್ಧ ಪ್ರಾರಂಭವಾದಾಗ ಸಾವರ್ಕರ್ ಸಹೋದರರೂ ಹಿಂದೂಗಳನ್ನು ಬ್ರಿಟಿಷ್ ಸೇನೆಯಲ್ಲಿ ಭರ್ತಿ ಮಾಡುತ್ತಾ, ಬ್ರಿಟಿಷ್ ಸಾಮ್ರಾಜ್ಯವನ್ನು ಗಟ್ಟಿಗೊಳಿಸಿದರು. 1942ರಲ್ಲಿ ಇಡೀ ದೇಶ ಬ್ರಿಟಿಷರ ವಿರುದ್ಧ ಬೀದಿಯಲ್ಲಿದ್ದಾಗ ಸಾವರ್ಕರ್ ಮತ್ತವರ ಹಿಂದೂ ಮಹಾಸಭಾ ಬ್ರಿಟಿಷರೊಂದಿಗೆ ಸೇರಿಕೊಂಡು ಸರಕಾರ ರಚಿಸಿತ್ತು. ಸ್ವಾತಂತ್ರ್ಯ ಹೋರಾಟ ಮಾಡುತ್ತಿದ್ದ ಜನರ ಮೇಲೆ ಹಿಂದೂ ಮಹಾಸಭಾ ಸರಕಾರ ಗುಂಡಿನ ಮಳೆ ಸುರಿಸಿ ದಮನ ಮಾಡಿತ್ತು. ಅದಕ್ಕಾಗಿ ಬ್ರಿಟಿಷ್ ಸರಕಾರದಿಂದ ಮಾನ್ಯತೆ ಹಾಗೂ ಸವಲತ್ತುಗಳನ್ನು ಕೂಡಾ ಅವರು ಪಡೆದುಕೊಂಡರು. ಹೀಗಾಗಿ ಸಾವರ್ಕರ್ ಸಹೋದರರು ಬೀದಿಗೆ ಬಿದ್ದರೆಂಬುದಾಗಲೀ, 1923ರ ನಂತರವೂ ಬ್ರಿಟಿಷರು ಅವರ ಮೇಲೆ ನಿಗಾ ಇಟ್ಟಿದ್ದರೆಂಬುದಾಗಲೀ ನಿಜವಲ್ಲ. ಹೆಚ್ಚಿನ ಮಾಹಿತಿಗಳಿಗೆ ಸಂಘಪರಿವಾರದವರೂ ನಿಜವೆಂದು ಒಪ್ಪುವ ಧನಂಜಯ್ ಕೀರ್ ಅವರು ಬರೆದಿರುವ ಸಾವರ್ಕರ್ ಜೀವನ ಚರಿತ್ರೆಯನ್ನು ಓದಬಹುದು. ಹಾಗೂ ಆ ಕಾಲದ ಸಾವರ್ಕರ್ ಅವರ ಭಾಷಣಗಳನ್ನು ಓದಬಹುದು. ಇನ್ನು ಕಾಂಗ್ರೆಸ್ ಅದೇ ರೀತಿಯ ಹೋರಾಟ ಮಾಡಿತ್ತೇ ಎಂಬ ಪ್ರಶ್ನೆ. ಆಗ ಸ್ವಾತಂತ್ರ್ಯ ಹೋರಾಟದ ಪ್ರಮುಖ ಧಾರೆಯಲ್ಲಿದ್ದ ಕಾಂಗ್ರೆಸ್ ಒಂದು ಚಳವಳಿಯಾಗಿತ್ತು. ಈ ದೇಶದ ಕೆಲವು ದೇಶಪ್ರೇಮಿ ಭೂಮಾಲಕರು, ರಾಜರನ್ನೂ ಒಳಗೊಂಡಂತೆ ಸುಶಿಕ್ಷಿತ ಮೇಲ್ ಮಧ್ಯಮ ವರ್ಗದವರು, ವಿದ್ಯಾರ್ಥಿಗಳು, ವಕೀಲರು, ರೈತಾಪಿಗಳು, ರೈತ ಕೂಲಿಗಳು ಸಹ ಕಾಂಗ್ರೆಸ್ ನೇತೃತ್ವದ ಸ್ವಾತಂತ್ರ್ಯ ಸಮರದಲ್ಲಿದ್ದರು. ಕೆಲವು ಕಾಂಗ್ರೆಸ್ ನಾಯಕರು ಸಾವರ್ಕರ್ ಸಹೋದರರಿಗಿಂತ ಹೆಚ್ಚು ಬಂಧನ ಮತ್ತು ಜೈಲು ವಾಸಗಳನ್ನು ಅನುಭವಿಸಿದರು. ಅದರಲ್ಲಿ ಗಾಂಧಿ, ನೆಹರೂ, ಸರ್ದಾರ್ ಪಟೇಲ್ ಅಂತಹವರು ಇದ್ದಾರೆ. ಮಿಕ್ಕಂತೆ ಕಾಂಗ್ರೆಸ್‌ನ ಹಲವಾರು ಅನಾಮಧೇಯ ಕಾರ್ಯಕರ್ತರು ಮತ್ತು ಕೆಳಹಂತದ ಹಾಗೂ ಬಡ-ಮಧ್ಯಮ ವರ್ಗದ ನಾಯಕರು, ಸಾವರ್ಕರ್ ಸಹೋದರರಿಗಿಂತ, ನೆಹರೂ-ಗಾಂಧಿಯವರಿಗಿಂತ ಹೆಚ್ಚಿನ ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ ಸ್ವಾತಂತ್ರ್ಯದ ಲಾಭ ಪಡೆದ ರಾಜರ ಮತ್ತು ಭೂ ಮಾಲಕವರ್ಗದ ಆಸಕ್ತಿಗಳ ಪರವಾಗಿ ಧ್ವನಿ ಎತ್ತಿದ್ದು ಮಾತ್ರ ಇದೇ ಆರೆಸ್ಸೆಸ್, ಅವರ ಭಾರತೀಯ ಜನ ಸಂಘ ಮತ್ತು ಸಾವರ್ಕರ್.
ಪ್ರಶ್ನೆ 5: ದ್ವಿರಾಷ್ಟ್ರ ಸಿದ್ಧಾಂತವನ್ನು ಮೊದಲು ಮಂಡಿಸಿದ್ದು ಅಲಿಗಡ ವಿಶ್ವವಿದ್ಯಾನಿಲಯದ ಸರ್ ಸಯ್ಯದ್ ಅಹ್ಮದ್ ಖಾನ್. ಸಾವರ್ಕರ್ ಮತ್ತು ಹಿಂದೂ ಮಹಾಸಭಾ ಕೊನೆಯವರೆಗೂ ಅಖಂಡ ಭಾರತಕ್ಕೆ ಹೋರಾಡುತ್ತಿದ್ದದ್ದು ತಮಗೆ ಗೊತ್ತಿಲ್ಲವೇ?
ಸಂಘಪರಿವಾರದವರು ಮಾನ್ಯ ಮಾಡುವ ಪ್ರಖ್ಯಾತ ಇತಿಹಾಸಕಾರ ಆರ್.ಸಿ. ಮಜುಂದಾರ್ ಅವರು ದ್ವಿರಾಷ್ಟ್ರ ಸಿದ್ಧಾಂತದ ಹುಟ್ಟಿನ ಬಗ್ಗೆ ಹೀಗೆ ಹೇಳುತ್ತಾರೆ: ‘‘ದ್ವಿರಾಷ್ಟ್ರ ಸಿದ್ಧಾಂತದ ಸೃಷ್ಟಿಕರ್ತರು ಬಂಗಾಳ ಪ್ರಾಂತದ ನಭಾ ಗೋಪಾಲ್ ಅವರು. ಮುಸ್ಲಿಮ್ ಲೀಗ್ ಈ ಬಗ್ಗೆ ಪ್ರಸ್ತಾಪ ಮಾಡುವ 50 ವರ್ಷಗಳಿಗೆ ಮುಂಚೆ ಅವರು ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಮ್ ಎಂಬ ಎರಡು ರಾಷ್ಟ್ರಗಳಿವೆ’’ ಎಂದು ಪ್ರತಿಪಾದಿಸಿದ್ದರು. (Majumdar, R. C., Three Phases of India’s Struggle for Freedom)
ಅಂಬೇಡ್ಕರ್ ಅವರು ತಮ್ಮ ‘ಪಾಕಿಸ್ತಾನ ಅಥವಾ ಭಾರತದ ವಿಭಜನೆಯ ಪ್ರಶ್ನೆ’ ಎಂಬ ವಿದ್ವತ್ಪೂರ್ಣ ಬರಹದಲ್ಲಿ ಉಲ್ಲೇಖಿಸುವಂತೆ ಆರ್ಯ ಸಮಾಜದ ಭಾಯಿ ಪರಮಾನಂದ್ ಅವರು 1909ರ ಸುಮಾರಿನಲ್ಲೇ ಹೀಗೆ ಹೇಳುತ್ತಾರೆ:
‘‘ಸಿಂಧ್ ಪ್ರಾಂತದ ಆಚೆಗಿರುವ ಪ್ರಾಂತಗಳನ್ನು ಅಫ್ಘಾನಿಸ್ತಾನ ಮತ್ತು ವಾಯುವ್ಯ ಪ್ರಾಂತಗಳ ಜೊತೆ ಸೇರಿಸಿ ಮುಸಲ್ಮಾನ ಸಾಮ್ರಾಜ್ಯವನ್ನು ಸ್ಥಾಪಿಸಬೇಕು. ಅಲ್ಲಿರುವ ಹಿಂದೂಗಳು ಇಲ್ಲಿಗೂ, ಇಲ್ಲಿರುವ ಮುಸ್ಲಿಮರು ಅಲ್ಲಿಗೂ ಹೋಗಬೇಕು’’ ಎಂದು ಹೇಳುವ ಮೂಲಕ ಮುಸ್ಲಿಮ್ ಲೀಗ್, ಜಿನ್ನಾ, ಸಯ್ಯದ್ ಅಹ್ಮದ್ ಖಾನ್ ಅವರಿಗಿಂತಲೂ ಮುಂಚೆಯೇ ದ್ವಿರಾಷ್ಟ್ರ ಸಿದ್ಧಾಂತ ಪ್ರತಿಪಾದಿಸಿದ್ದರು. ಅಷ್ಟು ಮಾತ್ರವಲ್ಲ. 1924ರಲ್ಲಿ ಆರ್ಯ ಸಮಾಜದ ಹಾಗೂ ಹಿಂದೂ ಮಹಾಸಭಾ ಹಿನ್ನೆಲೆಯ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ ಲಾಲಾ ಲಜಪತ್ ರಾಯ್ ಅವರು ಟ್ರಿಬ್ಯೋನ್ ಪತ್ರಿಕೆಗೆ 1924ರಲ್ಲಿ ಬರೆದ ಲೇಖನದಲ್ಲಿ :
‘‘ನನ್ನ ಸಲಹೆ ಏನೆಂದರೆ ಮುಸ್ಲಿಮರು ಹೆಚ್ಚಿರುವ ಪಶ್ಚಿಮ ಪಂಜಾಬನ್ನು ಮುಸ್ಲಿಮ್ ಆಡಳಿತದ ಪ್ರಾಂತವನ್ನಾಗಿಯೂ, ಸಿಖ್ಖರು ಹಾಗೂ ಹಿಂದೂಗಳು ಹೆಚ್ಚಿರುವ ಪೂರ್ವ ಪಂಜಾಬನ್ನು ಹಿಂದೂ ಆಡಳಿತದ ಪ್ರಾಂತವನ್ನಾಗಿಯೂ ವಿಭಜಿಸಬೇಕು’’ ಎಂದು ಬಲವಾಗಿ ಪ್ರತಿಪಾದಿಸಿದ್ದರು. ಹೀಗೆ ದ್ವಿರಾಷ್ಟ್ರ ಸಿದ್ಧಾಂತದ ಜನಕರು ಹಿಂದೂರಾಷ್ಟ್ರವಾದಿಗಳೇ ಆಗಿದ್ದಾರೆ. ಹಾಗಿದ್ದಲ್ಲಿ ಸಾವರ್ಕರ್ ಅವರು ದ್ವಿರಾಷ್ಟ್ರ ಸಿದ್ಧಾಂತದ ವಿರುದ್ಧವಿದ್ದರೇ? ಇದರ ಬಗ್ಗೆ 1937ರಲ್ಲಿ ಅವರು ಹೀಗೆ ಬರೆಯುತ್ತಾರೆ: ‘‘ಭಾರತದ ಒಳಗೆ ಎರಡು ಪರಸ್ಪರ ವಿರುದ್ಧ ರಾಷ್ಟ್ರಗಳಿವೆ. ಕೆಲವು ಬಾಲಿಶ ರಾಜಕಾರಣಿಗಳು ಭಾರತ ಈಗಾಗಲೇ ಒಂದು ರಾಷ್ಟ್ರವಾಗಿದೆ ಎಂದು ಹೇಳುತ್ತಾರೆ. ಆದರೆ ಭಾರತ ಒಂದು ರಾಷ್ಟ್ರ ಅಲ್ಲವೇ ಅಲ್ಲ. ಬದಲಿಗೆ ಭಾರತದೊಳಗೆ ಹಿಂದೂ ರಾಷ್ಟ್ರ ಮತ್ತು ಮುಸ್ಲಿಮ್ ರಾಷ್ಟ್ರವೆಂಬ ಎರಡು ರಾಷ್ಟ್ರಗಳಿವೆ.’’ (ಸಾವರ್ಕರ್ ಸಮಗ್ರ ವಾಘ್ಮಯ, 6ನೇ ಸಂಪುಟ, ಪುಟ 296)
ಇದಾದ ನಂತರ ಜಿನ್ನಾ 1940ರಲ್ಲಿ ದ್ವಿರಾಷ್ಟ್ರ ಸಿದ್ಧಾಂತವನ್ನು ಮುಂದಿಟ್ಟಾಗ ಸಾವರ್ಕರ್ ಅವರು:
‘‘ಜಿನ್ನಾ ಅವರ ಹೇಳಿಕೆಯ ಜೊತೆ ನನಗೆ ಯಾವುದೇ ತಗಾದೆಯಿಲ್ಲ. ನಾವು ಹಿಂದೂಗಳು ಬೇರೆಯದೇ ಆದ ರಾಷ್ಟ್ರ. ಹಿಂದೂ ಮತ್ತು ಮುಸ್ಲಿಮ್ ಬೇರೆಬೇರೆ ರಾಷ್ಟ್ರಗಳೇ ಆಗಿದ್ದಾರೆ’’ ಎನ್ನುತ್ತಾರೆ. ಈ ಬಗ್ಗೆ ಅಂಬೇಡ್ಕರ್ ಅವರು ತಮ್ಮ ‘ಪಾಕಿಸ್ತಾನ್..’ ಬರಹದಲ್ಲಿ ಹೀಗೆ ಹೇಳುತ್ತಾರೆ:
‘‘ವಿಚಿತ್ರವೆಂದರೆ ಭಾರತ ಒಂದು ರಾಷ್ಟ್ರವೋ ಎರಡು ರಾಷ್ಟ್ರವೋ ಎಂಬ ಸಿದ್ಧಾಂತದ ಬಗ್ಗೆ ಸಾವರ್ಕರ್ ಮತ್ತು ಜಿನ್ನಾ ಪರಸ್ಪರ ವಿರುದ್ಧವಾದುದನ್ನು ಹೇಳುತ್ತಿಲ್ಲ. ಬದಲಿಗೆ ಆ ವಿಷಯದಲ್ಲಿ ಅವರಿಬ್ಬರಿಗೂ ಸಂಪೂರ್ಣ ಸಹಮತ ಇದೆ. ಅವರಿಬ್ಬರಿಗೂ ಆ ವಿಷಯದಲ್ಲಿ ಸಮ್ಮತಿ ಇರುವುದು ಮಾತ್ರವಲ್ಲ, ಭಾರತದೊಳಗೆ ಹಿಂದೂ ರಾಷ್ಟ್ರ ಮತ್ತು ಮುಸ್ಲಿಮ್ ರಾಷ್ಟ್ರ ಎಂಬ ಎರಡು ರಾಷ್ಟ್ರಗಳಿವೆ ಎಂದು ಅವರಿಬ್ಬರೂ ಬಲವಾಗಿ ಪ್ರತಿಪಾದಿಸುತ್ತಾರೆ.’’ ಎಂದು ಬರೆಯುತ್ತಾರೆ. ಈ ದ್ವಿರಾಷ್ಟ್ರ ಸಿದ್ಧಾಂತಕ್ಕೆ ಸಾವರ್ಕರ್ ಪರಿಹಾರ ಏನೆಂದರೆ ಭಾರತ ಹಿಂದೂ ರಾಷ್ಟ್ರವಾಗುವುದು. ಮುಸ್ಲಿಮರು ತಮ್ಮ ಪ್ರತ್ಯೇಕ ಅಸ್ತಿತ್ವವನ್ನೇ ಬಿಟ್ಟುಕೊಟ್ಟು ಹಿಂದೂ ರಾಷ್ಟ್ರದಲ್ಲಿ ಲೀನವಾಗುವುದು. ಆದರೆ ಈ ಹಿಂದೂ ರಾಷ್ಟ್ರ ಮನುಸ್ಮತಿಯ ಆಧಾರದಲ್ಲಿ ಬ್ರಾಹ್ಮಣಶಾಹಿ ಪ್ರಜಾತಂತ್ರ ವಿರೋಧಿ ರಾಷ್ಟ್ರ. ಆದ್ದರಿಂದಲೇ ಅಂಬೇಡ್ಕರ್ ಅವರು ಅದೇ ಬರಹದಲ್ಲಿ:
‘‘ಭಾರತವು ಹಿಂದೂ ರಾಷ್ಟ್ರವಾಗುವುದೆಂದರೆ ಅದಕ್ಕಿಂತ ವಿಪತ್ತು ಮತ್ತೊಂದಿಲ್ಲ.’’ ಎಂದು ಎಚ್ಚರಿ ಸಿದ್ದರು.
ಪ್ರಶ್ನೆ 6: ಅಂಬೇಡ್ಕರ್ ಅವರು ‘ಪಾಕಿಸ್ತಾನ್..’ ಬರಹದಲ್ಲಿ ಭಾರತದ ಮುಸ್ಲಿಮರೆಲ್ಲರೂ ಪಾಕಿಸ್ತಾನಕ್ಕೆ ಹೋಗ ಬೇಕೆಂದು ಹೇಳಿದ್ದರು. ಹಾಗಿದ್ದರೆ ಅವರು ಕೋಮುವಾದಿಯೇ?
ಇದು ಅಂಬೇಡ್ಕರ್ ಅವರನ್ನು ಕೇಸರೀಕರಿಸುವ ಭಾಗವಾಗಿ ಸಂಘಪರಿವಾರಿಗಳು ಸಂದರ್ಭವಿಲ್ಲದೆ ಹೆಕ್ಕಿ ತೆಗೆದು ಮಾಡುತ್ತಿರುವ ಅಪಪ್ರಚಾರ. ದ್ವಿರಾಷ್ಟ್ರ ಸಿದ್ಧಾಂತದ ಬಗ್ಗೆ ಅಂಬೇಡ್ಕರ್ ಅಭಿಪ್ರಾಯ ಏನಿತ್ತು ಎಂಬ ಬಗ್ಗೆ ಭಾರತೀಯರು ಎಲ್ಲರೂ ಕಡ್ಡಾಯವಾಗಿ ಅವರ ‘ಪಾಕಿಸ್ತಾನ್..’ ಬರಹವನ್ನು ಕೂಲಂಕಷವಾಗಿ ಓದುವುದು ಒಳ್ಳೆಯದು. ಅದರಲ್ಲಿ ಅವರು ಧರ್ಮಾಧಾರಿತ ರಾಷ್ಟ್ರ ಪರಿಕಲ್ಪನೆಯನ್ನು ಸಾರಾ ಸಗಟು ವಿರೋಧಿಸುತ್ತಾರೆ. ಹೀಗಾಗಿ ಹಿಂದೂ ರಾಷ್ಟ್ರ ಹಾಗೂ ಪಾಕಿಸ್ತಾನ ಎರಡನ್ನೂ ವಿರೋಧಿಸುತ್ತಾರೆ. ಅದರ ಭಾಗವಾಗಿಯೇ ಇಸ್ಲಾಮ್ ಧರ್ಮದ ಆಚರಣೆಯಲ್ಲಿರುವ ಜಿಗುಟುಗಳನ್ನು ಮತ್ತು ಅಪ್ರಜಾತಾಂತ್ರಿಕವಾದ ಅಂಶಗಳನ್ನು ಕೂಡಾ ವಿರೋಧಿಸುತ್ತಾರೆ. ಹಾಗೆಯೇ ಹಿಂದೂ ಧರ್ಮದ ಹೆಸರಿನಲ್ಲಿರುವ ಆರೆಸ್ಸೆಸ್-ಸಾವರ್ಕರ್ ಪ್ರತಿಪಾದಿಸುವ ಬ್ರಾಹ್ಮಣಶಾಹಿ ಹಿಂದೂ ರಾಷ್ಟ್ರವನ್ನು ದೇಶಕ್ಕೆ ಒದಗುವ ಮಹಾ ವಿಪತ್ತು ಎಂದು ಎಚ್ಚರಿಸುತ್ತಾರೆ. ಆದರೆ ದೇಶವಿಭಜನೆ ವಾಸ್ತವವೇ ಆಗಿಬಿಟ್ಟರೆ ಹೆಚ್ಚಿನ ಕೋಮು ನರಮೇಧಗಳಾಗದ ರೀತಿ ಅದನ್ನು ಬಗೆಹರಿಸಿಕೊಳ್ಳಬೇಕು ಎನ್ನುವುದು ಅವರ ಕಾಳಜಿಯಾಗಿತ್ತು. ದೇಶವಿಭಜನೆಯ ಬಗ್ಗೆ ಅಂಬೇಡ್ಕರ್‌ರವರು ‘ಪಾಕಿಸ್ತಾನ್..’ ಬರಹದಲ್ಲಿ ಬಯಸುವ ಪರಿಹಾರ ಇದು :
“If Hindu Raj does become a fact, it will, no doubt, be the greatest calamity for this country. No matter what the Hindus say, Hinduism is a menace to liberty, equality and fraternity. On that account it is incompatible with democracy. Hindu Raj must be prevented at any cost.
But is Pakistan the true remedy against it ?...
Not partition, but the abolition of the Hindu Maha sabha and the Muslim League and the formation of a mixed party of Hindus and Muslims is the only effective way of burying the ghost of Hindu Raj.”
(ಹಿಂದೂ ರಾಜ್ ಅಸ್ತಿತ್ವಕ್ಕೆ ಬರುವುದೆಂದರೆ ದೇಶಕ್ಕೆ ಮಹಾ ವಿಪತ್ತು ಒದಗಿದಂತೆ. ಹಿಂದೂಗಳು ಏನೇ ಹೇಳಿದರೂ ಹಿಂದೂ ಧರ್ಮವೆಂಬುದು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಕ್ಕೆ ಒಂದು ದೊಡ್ಡ ಆಪತ್ತು. ಹೀಗಾಗಿ ಹಿಂದೂ ಧರ್ಮ ಹಾಗೂ ಪ್ರಜಾತಂತ್ರ ಒಂದಕ್ಕೊಂದು ಹೊಂದಿಕೆಯಾಗುವುದಿಲ್ಲ. ಆದ್ದರಿಂದ ಹಿಂದೂ ರಾಷ್ಟ್ರ ಸ್ಥಾಪನೆಯನ್ನು ಹೇಗಾದರೂ ಮಾಡಿ ತಡೆಹಿಡಿಯಲೇ ಬೇಕು. ಆದರೆ ಅದಕ್ಕೆ ಪಾಕಿಸ್ತಾನ ಪರಿಹಾರವಲ್ಲ. ದೇಶವಿಭಜನೆ ಪರಿಹಾರವಲ್ಲ. ಬದಲಿಗೆ ಹಿಂದೂ ಮಹಾಸಭಾ ಹಾಗೂ ಮುಸ್ಲಿಮ್ ಲೀಗ್‌ಗಳಂತಹ ಕೋಮುವಾದಿ ಪಕ್ಷಗಳನ್ನು ರದ್ದುಗೊಳಿಸಿ ಹಿಂದೂಗಳು ಹಾಗೂ ಮುಸ್ಲಿಮರು ಇಬ್ಬರೂ ಇರುವ ಮಿಶ್ರಪಕ್ಷಗಳನ್ನು ಸ್ಥಾಪಿಸುವುದೊಂದೇ ಹಿಂದೂ ರಾಷ್ಟ್ರವೆಂಬ ಭೂತವನ್ನು ಉಚ್ಚಾಟಿಸಲು ಇರುವ ಏಕೈಕ ಮಾರ್ಗ)
(DR. BABASAHEB AMBEDKAR : WRITINGS AND SPEECHES. VOL 8, p. 358)
ಪ್ರಶ್ನೆ 7: ಇಂದಿರಾ ಗಾಂಧಿಯವರು ಸಾವರ್ಕರ್ ಅವರನ್ನು ದೇಶಭಕ್ತರೆಂದು ಹೊಗಳಿ ಅಂಚೆ ಚೀಟಿ ಬಿಡುಗಡೆ ಮಾಡಿದ್ದರು. ಹಾಗಿದ್ದಲ್ಲಿ ಇಂದಿರಾ ಗಾಂಧಿಯವರಿಗೆ ಸಾವರ್ಕರ್ ಬಗ್ಗೆ ಗೊತ್ತಿರಲಿಲ್ಲವೇ?
ಸಾವರ್ಕರ್ ಅವರು 1966ರಲ್ಲಿ ನಿಧನರಾದ ನಂತರ ಇಂದಿರಾ ಗಾಂಧಿಯವರು 1970ರಲ್ಲಿ ಸಾವರ್ಕರ್ ಹೆಸರಲ್ಲಿ ಅಂಚೆ ಚೀಟಿ ತಂದಿದ್ದು ನಿಜ. ಅಷ್ಟು ಮಾತ್ರವಲ್ಲ. ಸಾವರ್ಕರ್ ಅವರ ಬಗ್ಗೆ ಒಂದು ಸಾಕ್ಷ ಚಿತ್ರವನ್ನು ಕೂಡ ಬಿಡುಗಡೆ ಮಾಡಿದ್ದರು. ಇದಕ್ಕೆ ಕಾಂಗ್ರೆಸ್ ಉತ್ತರ ಹೇಳಲೇ ಬೇಕು. ಏಕೆಂದರೆ, 1967ರಲ್ಲಿ ಗಾಂಧಿ ಹತ್ಯೆಯ ಹಿಂದಿನ ಸಂಚಿನ ಕುರಿತು ಜೀವನ್ ಕಪೂರ್ ಆಯೋಗ ತನ್ನ ವರದಿಯನ್ನು ನೀಡಿತ್ತು. ಆ ವರದಿಯು ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಅವರ ಸ್ಪಷ್ಟ ಪಾತ್ರವನ್ನು ಹಾಗೂ ಹತ್ಯೆಗೆ ಮುಂಚೆ ಗೋಡ್ಸೆ ಮತ್ತು ಸಾವರ್ಕರ್ ಭೇಟಿ ಮಾಡಿ ಸಂಚು ಮಾಡಿದ್ದನ್ನು ಸಾಬೀತು ಮಾಡಿತ್ತು. ಇಷ್ಟು ಸ್ಪಷ್ಟ ನಿದರ್ಶನಗಳು ದೊರೆತ ಮೇಲೂ ಇಂದಿರಾ ಗಾಂಧಿ ಸರಕಾರ ಸಾವರ್ಕರ್ ಅವರನ್ನು ಹೇಗೆ ಭಾರತಾಂಬೆಯ ಹೆಮ್ಮೆಯ ಮಗನೆಂದು ಬಣ್ಣಿಸಿತೆಂದು ಕಾಂಗ್ರೆಸ್ ಸ್ಪಷ್ಟೀಕರಣ ನೀಡುವ ಅಗತ್ಯವಿದೆ. ಆಗ ತಾನೆ ಕಾಂಗ್ರೆಸ್ ಒಳ ವಿಭಜನೆಯಿಂದ ಹೊರಬಂದು ಹೊಸದಾಗಿ ತನ್ನದೇ ಆದ ಪಕ್ಷ ಕಟ್ಟಿಕೊಳ್ಳುತ್ತಿದ್ದ ಇಂದಿರಾ ಗಾಂಧಿಯವರು ತನ್ನ ರಾಜಕೀಯ ವಿರೋಧಿಗಳನ್ನು ಹಲವು ರೀತಿಗಳಿಂದ ನಿಭಾಯಿಸುತ್ತಿದ್ದರು. ಅದರ ಭಾಗವಾಗಿಯೂ ಈ ಅಪಾಯಕಾರಿ ಧೋರಣೆ ತಳೆದಿರಬಹುದು. ಏಕೆಂದರೆ 1971ರ ಬಾಂಗ್ಲಾ ಯುದ್ಧದ ನಂತರ 1974ರ ತನಕ ಆರೆಸ್ಸೆಸ್ ಮತ್ತು ಭಾರತೀಯ ಜನಸಂಘ ಇಂದಿರಾ ಗಾಂಧಿಯವರಿಗೆ ಅಷ್ಟು ತಲೆ ನೋವು ಕೊಡುವುದಿಲ್ಲ. ಇಂತಹ ಅವಕಾಶವಾದಿ ರಾಜಕೀಯ ಪ್ರಯೋಜನಗಳಿಗಾಗಿ ಕಾಂಗ್ರೆಸ್ ಹಿಂದೂ ರಾಷ್ಟ್ರ ಸಿದ್ಧಾಂತದ ಜೊತೆ ರಾಜಿ ಮಾಡಿಕೊಂಡಿರುವ ಹಲವಾರು ಉದಾಹರಣೆಗಳಿವೆ. ಆದರೆ ಇಂದಿರಾ ಗಾಂಧಿಯವರು ಹೇಳಿದ್ದೆಲ್ಲವನ್ನು ಆರೆಸ್ಸೆಸ್ ಒಪ್ಪಿಕೊಳ್ಳುವುದಾದರೆ 1975ರಲ್ಲಿ ಆರೆಸ್ಸೆಸ್ ಪರಮ ದೇಶದ್ರೋಹಿ ಸಂಘಟನೆಯೆಂದು ಇಂದಿರಾಗಾಂಧಿ ಹೇಳಿದ್ದನ್ನು ಕೂಡ ಒಪ್ಪಿಕೊಳ್ಳುವುದೇ?
ಪ್ರಶ್ನೆ 8: ಆರೆಸ್ಸೆಸ್ ಸಂಸ್ಥಾಪಕ ಹೆಡಗೆವಾರ್ 1920ರಲ್ಲಿ ಮತ್ತು 1930ರಲ್ಲಿ ಹೋರಾಟದಲ್ಲಿ ಭಾಗವಹಿಸಿ ಸೆರೆವಾಸ ಅನುಭವಿಸಿರಲಿಲ್ಲವೇ? ನಾಗಪುರದಲ್ಲಿ ಕಾಂಗ್ರೆಸ್ ಸಮಾವೇಶ ಸಂಘಟಿಸಿರಲಿಲ್ಲವೇ? ಇವೆಲ್ಲವೂ ಸ್ವಾತಂತ್ರ್ಯ ಹೋರಾಟವಲ್ಲವೇ?
ಭಾರತ ನ್ಯಾಷನಲ್ ಕಾಂಗ್ರೆಸ್ ಸ್ಥಾಪನೆಯಾದದ್ದು 1885ರಲ್ಲಿ. ಭಾರತದ ಸ್ವಾತಂತ್ರ್ಯ ಹೋರಾಟದ ಇತರ ಧಾರೆಗಳಾದ ಆಝಾದ್ - ಭಗತ್ ಸಿಂಗ್‌ರ ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕ್, ಭಾರತ ಕಮ್ಯುನಿಸ್ಟ್ ಪಕ್ಷ ಇತ್ಯಾದಿಗಳು ಸ್ಥಾಪನೆಯಾದದ್ದು ಆ ನಂತರದಲ್ಲಿ. ಆರೆಸ್ಸೆಸ್ ಸ್ಥಾಪನೆಯಾದದ್ದು 1925ರಲ್ಲಿ. ಹೀಗಾಗಿ ಬಹುಪಾಲು ಎಲ್ಲಾ ಧಾರೆಗಳ ಸ್ವಾತಂತ್ರ್ಯ ಹೋರಾಟಗಾರರೂ ತಮ್ಮ ಸಂಘಟನೆಗಳು ಹುಟ್ಟಿಕೊಳ್ಳುವ ಮುನ್ನ ಪ್ರಾರಂಭದ ದಿನಗಳಲ್ಲಿ ಕಾಂಗ್ರೆಸ್‌ನ ಭಾಗವಾಗಿದ್ದದ್ದು ಸಹಜ.
ಹಾಗೆಯೇ ಹೆಡಗೆವಾರರು 1925ರಲ್ಲಿ ಆರೆಸ್ಸೆಸ್ ಸ್ಥಾಪಿಸುವ ಮುನ್ನ ಬಾಲಗಂಗಾಧರ ತಿಲಕರ ಮಾರ್ಗದರ್ಶನದಲ್ಲಿ ನಾಗಪುರದ ಕಾಂಗ್ರೆಸ್ ಅಧಿವೇಶನವನ್ನು ಸಂಘಟಿಸಿದರು. 1920ರಲ್ಲಿ ಅಸಹಕಾರ ಚಳವಳಿಯ ಭಾಗವಾಗಿ ಒಂದೂವರೆ ವರ್ಷ ಸೆರೆವಾಸವನ್ನು ಅನುಭವಿಸಿದ್ದು ನಿಜ. ಆದರೆ ಅಸಹಕಾರ ಚಳವಳಿಯಲ್ಲಿ ಗಾಂಧಿಯವರು ಹಿಂದೂ-ಮುಸ್ಲಿಮ್ ಐಕ್ಯತೆಯನ್ನು ಚಳವಳಿಯ ಮುಖ್ಯ ಭೂಮಿಕೆಯಾಗಿಸಿದ್ದು ಹೆಡಗೆವಾರ್‌ರಿಗೆ ಅಪಾರ ಅಸಮಾಧಾನ ಉಂಟುಮಾಡಿತು ಹಾಗೂ ಸೆರೆವಾಸದಿಂದ ಹೊರಬಂದ ಕೂಡಲೇ ಸ್ವಾತಂತ್ರ್ಯ ಹೋರಾಟಕ್ಕೆ ಪರ್ಯಾಯವಾದ ಹಿಂದೂ ರಾಷ್ಟ್ರ ಚಳವಳಿ ಕಟ್ಟಲು ರತ್ನಗಿರಿಯಲ್ಲಿದ್ದ ಸಾವರ್ಕರ್ ಅವರನ್ನು ಭೇಟಿ ಮಾಡಿ ದೀಕ್ಷೆ ಪಡೆದರು. ಅದರ ಮುಂದುವರಿಕೆಯಾಗಿಯೇ 1925ರಲ್ಲಿ ಆರೆಸ್ಸೆಸ್ ಕಟ್ಟಿದರು. ಅವರು ಕಟ್ಟಿದ ಆರೆಸ್ಸೆಸ್‌ನ ಘೋಷಿತ ಉದ್ದೇಶ ಬ್ರಿಟಿಷರನ್ನು ಭಾರತ ಬಿಟ್ಟು ಓಡಿಸುವ ಸ್ವಾತಂತ್ರ ಹೋರಾಟವಾಗಿರಲೇ ಇಲ್ಲ. ಹೆಡಗೆವಾರ್‌ರ ಜೀವನ ಚರಿತ್ರೆಯನ್ನು ಬರೆದಿರುವ ಆರೆಸ್ಸೆಸ್ ನಾಯಕ ಹೂ.ವೆ. ಶೇಷಾದ್ರಿಯವರು ತಮ್ಮ ‘Dr..Hedegevar – The Epoch Maker’ ಪುಸ್ತಕದಲ್ಲಿ ದಾಖಲಿಸಿರುವಂತೆ :
“After establishing Sangh, Doctor Saheb in his speeches used to talk only of Hindu organization. Direct comment on Government used to be almost nil.”
(ಸಂಘವನ್ನು ಸ್ಥಾಪಿಸಿದ ನಂತರ ಅವರು ಕೇವಲ ಹಿಂದೂ ಸಂಘಟನೆಯ ಬಗ್ಗೆ ಮಾತ್ರ ಮಾತಾಡುತ್ತಿದ್ದರು. ಬ್ರಿಟಿಷ್ ಸರಕಾರದ ಬಗ್ಗೆ ಒಂದಿನಿತೂ ಪ್ರಸ್ತಾಪಿಸುತ್ತಿರಲಿಲ್ಲ.) ಅಷ್ಟು ಮಾತ್ರವಲ್ಲ, ಸ್ವಾತಂತ್ರ್ಯ ಹೋರಾಟವನ್ನು ಬ್ರಿಟಿಷ್ ವಿರೋಧಿ ಹೋರಾಟವಾಗಿಸಿರುವ ಬಗೆಯೇ ಖೇದ ವ್ಯಕ್ತಪಡಿಸಿದ್ದರು.
1929ರಲ್ಲಿ ಕಾಂಗ್ರೆಸ್‌ನ ಲಾಹೋರ್ ಅಧಿವೇಶನ ‘ಸಂಪೂರ್ಣ ಸ್ವಾತಂತ್ರ್ಯದ’ ಠರಾವನ್ನು ಅನುಮೋದಿಸಿತು. ಅದರ ಭಾಗವಾಗಿ 1930ರ ಜನವರಿ 26ರಂದು ದೇಶದೆಲ್ಲೆಡೆ ಕಾಂಗ್ರೆಸ್ ಕರೆಯ ಭಾಗವಾಗಿ ತ್ರಿವರ್ಣ ಧ್ವಜ ಹಾರಿಸಲು ಕರೆ ನೀಡಲಾಗಿತ್ತು. ದಂಡಿ ಸತ್ಯಾಗ್ರಹ ನಡೆದಿತ್ತು.
ಆಗ, ಹೆಡಗೆವಾರ್, ಸಿ.ಪಿ. ಭಿಷ್ಕ್ಕರ್ ಹಾಗೂ ಹೂ.ವೆ. ಶೇಷಾದ್ರಿಯವರು ದಾಖಲಿಸಿರುವಂತೆ:
‘‘ಯಾವ ಕಾರಣಕ್ಕೂ ಆರೆಸ್ಸೆಸ್ ಈ ಹೋರಾಟದಲ್ಲಿ ಭಾಗವಹಿಸಬಾರದೆಂದೂ, ಜನವರಿ 26ರಂದು ತ್ರಿವರ್ಣ ಧ್ವಜದ ಬದಲು ಭಗವಾಧ್ವಜವನ್ನು ಹಾರಿಸಬೇಕೆಂದೂ, ಅತಿ ಆಸಕ್ತಿ ಇದ್ದವರು ವೈಯಕ್ತಿಕವಾಗಿ ಬೇಕಿದ್ದರೆ ಚಳವಳಿಯಲ್ಲಿ ಭಾಗವಹಿಸಬಹುದು’’ಎಂದು ಸುತ್ತೋಲೆ ಹೊರಡಿಸಲಾಯಿತು. ಕಾರ್ಯಕರ್ತರ ಅಪಾರ ಒತ್ತಡ ಹಾಗೂ ದ್ವೇಷದ ಭಾವನೆಯನ್ನು ಗಮನಿಸಿ ಹೆಡಗೆವಾರರು ತಮ್ಮ ಸರಸಂಘಚಾಲಕ ಹುದ್ದೆಗೆ ತಾತ್ಕಾಲಿಕವಾಗಿ ರಾಜೀನಾಮೆ ನೀಡಿ, ಅದರ ಜವಾಬ್ದಾರಿಯನ್ನು ಪರಾಂಜಪೆ ಎನ್ನುವವರಿಗೆ ವಹಿಸಿ ತಾವು ವೈಯಕ್ತಿಕ ನೆಲೆಯಲ್ಲಿ ದಂಡಿ ಸತ್ಯಾಗ್ರಹದಲ್ಲಲ್ಲದೆ ಜಂಗಲ್ ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದರು. ಅವರ ಜೀವನ ಚರಿತ್ರೆಕಾರರ ಪ್ರಕಾರ ಅವರು ಜೈಲಿಗೆ ಹೋಗಿದ್ದು ದೇಶಾದ್ಯಂತ ಜೈಲಿಗೆ ಬರುತ್ತಿದ್ದ ಯುವಕರ ಸಂಪರ್ಕ ಪಡೆದುಕೊಂಡು ಹಿಂದೂ ರಾಷ್ಟ್ರದ ಉದ್ದೇಶಕ್ಕೆ ಸಂಘಟಿಸುವುದಾಗಿತ್ತು. ಆದ್ದರಿಂದ ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಬಾರದು ಎನ್ನುವುದು ಆರೆಸ್ಸೆಸ್‌ನ ಸಂಸ್ಥಾಪಕರ ಆದೇಶವೇ ಆಗಿತ್ತು. 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ನಡೆದಾಗಲಂತೂ ಆರೆಸ್ಸೆಸ್‌ನ ಹಿರಿಯ ಸೋದರ ಸಂಘಟನೆಯಾದ ಹಿಂದೂ ಮಹಾ ಸಭಾ ಮತ್ತು ಆರೆಸ್ಸೆಸ್‌ನ ಪಿತಾಮಹ ಸಾವರ್ಕರ್ ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದು ಬ್ರಿಟಿಷ್ ಸರಕಾರ ಸೇರಿಕೊಂಡಿದ್ದರು. ಅದೂ ಮುಸ್ಲಿಮ್ ಲೀಗ್ ಜೊತೆಗೆ.
ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಪ್ರಾಣವನ್ನೇ ಬಲಿ ನೀಡಿದ ಆಝಾದ್, ಭಗತ್ ಸಿಂಗರಂತಹ ಕ್ರಾಂತಿಕಾರಿಗಳ ಬಗ್ಗೆಯೂ ಆರೆಸ್ಸೆಸ್‌ಗೆ ಕೀಳು ಅಭಿಪ್ರಾಯವಿತ್ತು. ಆರೆಸ್ಸೆಸ್‌ನ ಎರಡನೇ ಸರಸಂಘ ಚಾಲಕ ಗೋಳ್ವಾಲ್ಕರ್ ಅವರು ‘ಆರ್ಗನೈಸರ್’ ಪತ್ರಿಕೆಗೆ ಬರೆದ ಲೇಖನದಲ್ಲಿ:
‘‘ಭಗತ್ ಸಿಂಗ್ ಇನ್ನಿತ್ಯಾದಿ ಕ್ರಾಂತಿಕಾರಿಗಳದ್ದು ತಪ್ಪುಆದರ್ಶ. ಅವರಲ್ಲಿ ಲೋಪವಿದ್ದುದರಿಂದಲೇ ಅವರು ಯಶಸ್ವಿಯಾಗಲಿಲ್ಲ. ಅವರು ಭಾ