ಮುಂಬೈ-ತೋಕೂರು ವಿಶೇಷ ರೈಲು ಮಂಗಳೂರು ಜಂಕ್ಷನ್ವರೆಗೆ ವಿಸ್ತರಣೆ
ಸಾಂದರ್ಭಿಕ ಚಿತ್ರ
ಉಡುಪಿ, ಆ.26: ಮುಂಬೈಯ ಲೋಕಮಾನ್ಯ ತಿಲಕ್ ಹಾಗೂ ತೋಕೂರು ನಡುವೆ ಸಂಚರಿಸುವ ರೈಲು ನಂ. 01153/01154 ದೈನಂದಿನ ವಿಶೇಷ ರೈಲಿನ ಸಂಚಾರವನ್ನು ಗಣೇಶ ಚೌತಿಯ ಸಂದರ್ಭದಲ್ಲಿ ಜನರ ವಿಶೇಷ ಬೇಡಿಕೆಯಂತೆ ಮಂಗಳೂರು ಜಂಕ್ಷನ್ವರೆಗೆ ವಿಸ್ತರಿಸಲಾಗಿದೆ.
ರೈಲು ನಂ.01153 ಮುಂಬೈ ಲೋಕಮಾನ್ಯ ತಿಲಕ್-ತೋಕೂರು ದೈನಂದಿನ ವಿಶೇಷ ರೈಲು ಆ.28, 29, 30, ಸೆ.1, 2, 3ರಂದು ರಾತ್ರಿ 10.15ಕ್ಕೆ ಮುಂಬೈಯಿಂದ ನಿರ್ಗಮಿಸಲಿದ್ದು, ಮರುದಿನ ಸಂಜೆ 5.05ಕ್ಕೆ ತೋಕೂರು ಬದಲು ಮಂಗಳೂರು ಜಂಕ್ಷನ್ ತಲುಪಲಿದೆ.
ಅದೇ ರೀತಿ ರೈಲು ನಂ.01154 ತೋಕೂರು- ಲೋಕಮಾನ್ಯ ತಿಲಕ್ ದೈನಂದಿನ ವಿಶೇಷ ರೈಲು ಆ.29, 30, 31, ಸೆ.2, 3, 4ರಂದು ಸಂಜೆ 6.45ಕ್ಕೆ ಮಂಗಳೂರು ಜಂಕ್ಷನ್ನಿಂದ ಪ್ರಯಾಣ ಬೆಳೆಸಲಿದ್ದು, ಮರುದಿನ ಅಪರಾಹ್ನ 1.25ಕ್ಕೆ ಲೋಕಮಾನ್ಯ ತಿಲಕ್ ನಿಲ್ದಾಣ ತಲುಪಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
Next Story