ಹೊಸ ಅವತಾರದಲ್ಲಿ ಚಿಯಾನ್ ವಿಕ್ರಮ್: ʼಕೋಬ್ರಾʼ ಮೂಲಕ ಬಣ್ಣದ ಲೋಕಕ್ಕೆ ಇರ್ಫಾನ್ ಪಠಾಣ್ ಪಾದಾರ್ಪಣೆ
Photo: Twitter
ಚೆನ್ನೈ: ಟೀಂ ಇಂಡಿಯಾದ ಮಾಜಿ ವೇಗದ ಬೌಲರ್, ಆಲ್ ರೌಂಡರ್ ಇರ್ಫಾನ್ ಪಠಾಣ್ ಇದೀಗ ತಮ್ಮ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸಿನೆಮಾ ರಂಗದ ಮೂಲಕ ತಮ್ಮ ಅದೃಷ್ಟ ಪರೀಕ್ಷೆಯನ್ನು ಪಠಾಣ್ ಮಾಡಲಿದ್ದಾರೆ. ನಟನೆಗೆ ಪಾದಾರ್ಪಣೆ ಮಾಡಿರುವ ಇರ್ಫಾನ್ ಪಠಾಣ್, ತಮಿಳಿನ ಖ್ಯಾತ ನಟ ಚಿಯಾನ್ ವಿಕ್ರಮ್ ಅವರ ಹೊಸ ಚಿತ್ರ 'ಕೋಬ್ರಾ' ದಲ್ಲಿ ನಿರ್ಣಾಯಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ.
ಕೋಬ್ರಾ ಚಿತ್ರದ ಟ್ರೈಲರ್ನಲ್ಲಿ ಇರ್ಫಾನ್ ಕನಿಷ್ಟ 6 ಕ್ಕೂ ಹೆಚ್ಚು ಬಾರಿ ಕಾಣಿಸಿಕೊಂಡಿದ್ದಾರೆ. ಹೀಗಿರುವಾಗ ಚಿತ್ರದಲ್ಲಿ ಅವರಿಗೆ ಒಳ್ಳೆಯ ಪಾತ್ರವಿದೆ ಎಂದು ಹೇಳಲಾಗಿದೆ.
ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಇರ್ಫಾನ್
ಅಜಯ್ ಜ್ಞಾನಮುತ್ತು ನಿರ್ದೇಶನದ 'ಕೋಬ್ರಾ' ಆಗಸ್ಟ್ 31 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ಇರ್ಫಾನ್ ಪಠಾಣ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇರ್ಫಾನ್ ಪಾತ್ರವು ಅದ್ಭುತವಾದ ಲುಕ್ನಲ್ಲಿ ಕಾಣಿಸಿಕೊಂಡಿರುವುದು ಟ್ರೇಲರ್ನಲ್ಲಿ ಕಂಡುಬರುತ್ತದೆ.
ಟ್ರೈಲರ್ ಶೇರ್ ಮಾಡುವ ಮೂಲಕ ಅಭಿನಂದಿಸಿದ ರೈನಾ, ಉತ್ತಪ್ಪ
ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕೂಡ 'ಕೋಬ್ರಾ' ಚಿತ್ರದ ಟ್ರೈಲರ್ ಅನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ರೈನಾ ಇರ್ಫಾನ್ ನಟನೆಗೆ ಪಾದಾರ್ಪಣೆ ಮಾಡಿದ್ದಕ್ಕಾಗಿ ಅಭಿನಂದಿಸಿದ್ದಾರೆ.
ವೀಡಿಯೊವನ್ನು ಹಂಚಿಕೊಂಡ ರೈನಾ, “ಸಹೋದರ ಇರ್ಫಾನ್ ಪಠಾಣ್, ನೀವು ಕೋಬ್ರಾ ಚಿತ್ರದಲ್ಲಿ ನಟಿಸುವುದನ್ನು ನೋಡಿ ತುಂಬಾ ಸಂತೋಷವಾಗಿದೆ. ಈ ಚಿತ್ರವು ಸಂಪೂರ್ಣ ಆಕ್ಷನ್ನಿಂದ ಕೂಡಿದೆಯಂತೆ. ಚಿತ್ರದ ಯಶಸ್ಸಿಗಾಗಿ ನಿಮಗೆ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು” ಎಂದು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ರಾಬಿನ್ ಉತ್ತಪ್ಪ ಕೂಡಾ ಇರ್ಫಾನ್ ರನ್ನು ಅಭಿನಂದಿಸಿದ್ದು, ಚಿತ್ರದ ಪೋಸ್ಟರ್ ಹಂಚಿಕೊಂಡು ಖುಶಿ ವ್ಯಕ್ತಪಡಿಸಿದ್ದಾರೆ.
ಚಿತ್ರದ ಟ್ರೇಲರ್ ಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, 48 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ, ಯೂಟ್ಯೂಬ್ ನಲ್ಲಿ 8.4 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಟ್ರೇಲರ್ ಪಡೆದುಕೊಂಡಿದೆ. ಚಿತ್ರದಲ್ಲಿ ವಿಕ್ರಮ್ ಸುಮಾರು 20 ವಿಭಿನ್ನ ಗಮನಾರ್ಹ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಾರಾಗಣದಲ್ಲಿ ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ, ಮಿಯಾ ಜಾರ್ಜ್, ರೋಷನ್ ಮ್ಯಾಥ್ಯೂ, ಸರ್ಜಾನೋ ಖಾಲಿದ್ ಮತ್ತು ಮಿರ್ನಾಲಿನಿ ರವಿ ಮುಂತಾದವರು ಇದ್ದಾರೆ. ಚಿತ್ರವನ್ನು 90 ಕೋಟಿ ಬಜೆಟ್ನಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ವರದಿಯಾಗಿದೆ.
Watch out for this dasher!! Congratulations my brother on yet another avatar in your journey. I'm so happy for you and I can't wait to watch #cobra and whistle when you come onscreen. Wishing you all the love and success!! Love you brother!! pic.twitter.com/CGMT2KKBo9
— Robin Aiyuda Uthappa (@robbieuthappa) August 26, 2022
Every Problem Has A Mathematical Solution
— Irfan Pathan (@IrfanPathan) August 25, 2022
The #CobraTrailer is here
https://t.co/JapdaRt1HW@chiyaan 's #Cobra
An @AjayGnanamuthu Film
An @arrahman Musical @RedGiantMovies_ @Udhaystalin @7screenstudio @SrinidhiShetty7 @SonyMusicSouth pic.twitter.com/j5qoF46aNk
So happy for you brother @IrfanPathan to watch you perform in #Cobra. This looks like a complete action packed film, wishing you & entire cast huge success on this. Can’t wait to watch this one pic.twitter.com/UZiaiJMsYq
— Suresh Raina(@ImRaina) August 26, 2022