ಸೌದಿ ಅರೆಬಿಯಾ: 14,750 ಅಕ್ರಮ ಪ್ರವೇಶಿಗರ ಬಂಧನ
image source: SPA
ರಿಯಾದ್, ಸೆ.4: ಕಳೆದ 1 ವಾರದಲ್ಲಿ ನಿವಾಸ, ಉದ್ಯೋಗ ಮತ್ತು ಗಡಿ ಭದ್ರತೆ ಕಾನೂನನ್ನು ಉಲ್ಲಂಘಿಸಿದ ಆರೋಪದಲ್ಲಿ 14,750 ಜನರನ್ನು ಸೌದಿ ಅರೆಬಿಯಾದ ಅಧಿಕಾರಿಗಳು ಬಂಧಿಸಿರುವುದಾಗಿ ವರದಿಯಾಗಿದೆ.
ನಿವಾಸ ನಿಯಮಗಳನ್ನು ಉಲ್ಲಂಘಿಸಿದ 8,684 ಮಂದಿ, ಅಕ್ರಮವಾಗಿ ಗಡಿ ದಾಟುವ ಪ್ರಯತ್ನ ನಡೆಸಿದ 4,028 ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ವಿಷಯದಲ್ಲಿ 2,038 ಮಂದಿಯನ್ನು ಬಂಧಿಸಲಾಗಿದೆ. 225 ಜನರನ್ನು ಸೌದಿಗೆ ಅಕ್ರಮವಾಗಿ ಪ್ರವೇಶಿಸುವ ಪ್ರಯತ್ನ ನಡೆಸಿರುವುದಕ್ಕೆ , 34 ಜನರನ್ನು ನೆರೆದೇಶಕ್ಕೆ ನುಸುಳುವ ಪ್ರಯತ್ನದಲ್ಲಿ ಬಂಧಿಸಲಾಗಿದೆ. ಸೌದಿಗೆ ಅಕ್ರಮವಾಗಿ ಪ್ರವೇಶಿಸುವವರಿಗೆ ನೆರವಾಗುವರಿಗೆ 15 ವರ್ಷದವರೆಗೆ ಜೈಲುಶಿಕ್ಷೆ ಮತ್ತು 2,60,000 ಡಾಲರ್ವರೆಗೆ ದಂಡ ಅಥವಾ ಅವರ ವಾಹನ ಮತ್ತು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಆಂರಿಕ ಸಚಿವಾಲಯದ ಹೇಳಿಕೆ ತಿಳಿಸಿದೆ.
Next Story