ಫಹದ್ ಫಾಸಿಲ್ ನೂತನ ಚಿತ್ರ ಘೋಷಣೆ: 'ಹನುಮಾನ್ ಗೇರ್' ಪೋಸ್ಟರ್ ಬಿಡುಗಡೆ
Photo: Twitter/@sri50
ತಿರುವನಂತಪುರಂ: ತಮ್ಮ ವಿಶಿಷ್ಟ ರೀತಿಯ ಅಭಿನಯದಿಂದ ದೇಶಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಸೃಷ್ಟಿಸಿರುವ ಮಳೆಯಾಲಂ ನಟ ಫಹದ್ ಫಾಸಿಲ್(Fahadh Faasil) ಅವರ ನೂತನ ಚಿತ್ರ ಘೋಷಣೆಯಾಗಿದೆ. ಓಣಂ ಹಬ್ಬದ ಸಂಭ್ರಮದಲ್ಲಿ ಚಿತ್ರತಂಡವು ಫಾಸಿಲ್ ಅಭಿನಯದ ʼಹನುಮಾನ್ ಗೇರ್ʼ(Hanuman Gear) ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದೆ.
ಸುಧೀಶ್ ಶಂಕರ್ ನಿರ್ದೇಶನದ ಈ ಚಿತ್ರವು ಸೂಪರ್ ಗುಡ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. ಜೀಪ್ ಒಂದರ ಬಾನೆಟ್ ಮೇಲೆ ಕೈಯೆತ್ತಿ ನಿಂತಿರುವ ಫಹದ್ ಸುತ್ತಲೂ ನೆರೆದಿರುವ ಜನ ಸಮೂಹವು ಕೈಯೆತ್ತಿರುವ ಪೋಸ್ಟರ್ ಸದ್ಯ ಸಾಕಷ್ಟು ಕುತೂಹಲವನ್ನು ಹುಟ್ಟಿಸಿದೆ.
ಪುಷ್ಪ, ವಿಕ್ರಮ್, ಸೂಪರ್ ಡಿಲಕ್ಸ್ ಮೂಲಕ ದಕ್ಷಿಣ ಭಾರತದ ಇತರೆ ಚಿತ್ರರಂಗದಲ್ಲೂ ಚಿರಪರಿಚಿತರಾಗಿರುವ ಫಹದ್ ಫಾಸಿಲ್ ಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಬಿಡುಗಡೆಯಾಗಿರುವ ಪೋಸ್ಟರ್ ಗಮನಿಸಿದರೆ ಗ್ರಾಮ್ಯ ಕಥಾ ಹಂದರವಿರುವ ಚಿತ್ರದಂತೆ ಕಾಣುತ್ತದೆ. ಅಪ್ಪಟ ಗ್ರಾಮ್ಯ ಸೊಗಡಿನ ಚಿತ್ರಗಳಾದ 'ಞಾನ್ ಪ್ರಕಾಶನ್', 'ಮಹೇಶಿಂಟೆ ಪ್ರತೀಕಾರಂ', 'ಕುಂಬಳಂಗಿ ನೈಟ್ಸ್', 'ಮಲಯನ್ ಕುಞು' ಮೊದಲಾದ ಚಿತ್ರಗಳು ಫಹದ್ ಚಿತ್ರ ಬದುಕಿನಲ್ಲಿ ದೊಡ್ಡ ಮೈಲಿಗಲ್ಲನ್ನು ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಹನುಮಾನ್ ಗೇರ್ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ.
ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಝಬೆತ್ ಆರೋಗ್ಯ ಸ್ಥಿತಿ ಗಂಭೀರ
#FahadhFaasil’s new film #HanumanGear
— Sreedhar Pillai (@sri50) September 8, 2022
Producer : #RBChowudary
Director : #SudheeshSankar @SuperGoodFilms_ Production #96
Starring Powerhouse Talent #fahadhfaasil all set to kick-start tomorrow!
Watch this space for details! @JithanRamesh @JiivaOfficial pic.twitter.com/9VgroRKoN6