ಇಂಡಿಯಾ ಫ್ರೆಟರ್ನಿಟಿ ಫೋರಂ ಕರ್ನಾಟಕ ಚಾಪ್ಟರ್ ವತಿಯಿಂದ ಕ್ರೀಡೋತ್ಸವ ಕಾರ್ಯಕ್ರಮ
ಜಿದ್ದಾ: ಇಂಡಿಯಾ ಫ್ರೆಟರ್ನಿಟಿ ಫೋರಂ ಜಿದ್ದಾ ಕರ್ನಾಟಕ ಚಾಪ್ಟರ್ ವತಿಯಿಂದ ʼಪ್ರೆಟರ್ನಿಟಿ ಫೆಸ್ಟ್ 22ʼ ಅಂಗವಾಗಿ ಕ್ರೀಡೋತ್ಸವ ಕಾರ್ಯಕ್ರಮವು ಜಿದ್ದಾದ ಜಿಟಿಪಿಎಲ್ ಮೈದಾನದಲ್ಲಿ ನಡೆಯಿತು.
ಕ್ರೀಡೋತ್ಸವದ ಉದ್ಘಾಟನಾ ಸಮಾರಂಭದ ಸಭಾಧ್ಯಕ್ಷತೆ ವಹಿಸಿದ್ದ ಇಂಡಿಯಾ ಫ್ರೆಟರ್ನಿಟಿ ಫೋರಂ ಕರ್ನಾಟಕ ಚಾಪ್ಟರ್ ಜಿದ್ದಾ ಜಿಲ್ಲಾ ಸಮಿತಿ ಅಧ್ಯಕ್ಷರಾದ ಆರಿಫ್ ಬಜ್ಪೆ, ಕೋವಿಡ್ ನಿಂದ ಮಾನಸಿಕ ಖಿನ್ನತೆಗೊಳಗಾದ ಜನರನ್ನು ಅದರಿಂದ ಮುಕ್ತಗೊಳಿಸಲು ಮತ್ತು ಅನಿವಾಸಿ ಭಾರತೀಯರ ನಡುವೆ ಸಹೋದರತೆ ಸಾರಲು ಈ ಪ್ರೆಟರ್ನಿಟಿ ಫೆಸ್ಟ್ ಸಹಕಾರಿಯಾಗಲಿದೆ ಎನ್ನುತ್ತಾ ಕ್ರೀಡೋತ್ಸವದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಸ್ಫೂರ್ತಿ ಪ್ರೇರಣೆಯನ್ನು ನೀಡಿ, ಅ. 13ರಂದು ಜಿದ್ದಾದಲ್ಲಿ ನಡೆಯುವ ಕುಟುಂಬ ಸಮ್ಮಿಲನ 'ಸಂಭ್ರಮ' ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಇಂಡಿಯಾ ಫ್ರೆಟರ್ನಿಟಿ ಫೋರಂ ಜಿದ್ದಾ ಪ್ರಾದೇಶಿಕ ಸಮಿತಿ ಅಧ್ಯಕ್ಷರಾದ ಫಯಾಝ್ ತಮಿಳ್ನಾಡು ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು.
ಸಿ ಸಿಸ್ಟಮ್ ನ ಎಂಡಿ ಮಝರ್, ಕೌಂಟ್ರಿ ಸೇಲ್ಸ್ ವ್ಯವಸ್ಥಾಪಕ ಫಹೀಮುದ್ದೀನ್, ಸ್ವಾದ್ ಇಂಟರ್ನ್ಯಾಷನ್ ಮುಖ್ಯಸ್ಥ ಅದ್ನಾನ್ ಸಿದ್ದೀಕ್, ಇಂಡಿಯಾ ಫ್ರೆಟರ್ನಿಟಿ ಫೋರಂ ಜಿದ್ದಾ ವಲಯಾಧ್ಯಕ್ಷ ಆಸಿಫ್ ಮೂಳೂರು, ಸಾಮಾಜಿಕ ಕಾರ್ಯಕರ್ತರಾದ ಹಬೀಬ್, ಝೈನುದ್ದೀನ್ ಮೊದಲಾದವರು ಉಪಸ್ಥಿತರಿದ್ದರು. ಶಾಹಿದ್ ಸಭಾ ಕಾರ್ಯಕ್ರಮ ನಿರೂಪಿದರು, ಕಾರ್ಯದರ್ಶಿ ಇಮ್ತಿಯಾಝ್ ಶೇಖ್ ವಂದಿಸಿದರು.
ಗ್ರಾಮೀಣ ಕ್ರೀಡೆ ಲಗೋರಿ ಆಟದಲ್ಲಿ ಕ್ಲಾಸಿಕ್ ಪುತ್ತೂರು ಚಾಂಪಿಯನ್ ಪಟ್ಟ ಗೆದ್ದುಕೊಂಡರೆ ರಾಬಿಗ್ ಬ್ರದರ್ಸ್ ರನ್ನರ್ ಪ್ರಶಸ್ತಿ ಪಡೆದುಕೊಂಡರು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮಂಗಳೂರು ಕ್ರಿಕೆಟ್ ಕ್ಲಬ್ ತಂಡ ಚಾಂಪಿಯನ್ ಆಗಿ ಮೂಡಿ ಬಂದರೆ, ಗ್ರೌಂಡ್ ಫ್ರೆಂಡ್ಸ್ ತಂಡ ರನ್ನರ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡರು.
ಪುಟಾಣಿ ಮಕ್ಕಳಿಗಾಗಿ ನಡೆದ ವಿವಿಧ ಆಟೋಟ ಸ್ಪರ್ಧೆಗಳು ಕ್ರೀಢಾಭಿಮಾನಿಗಳ ಮನರಂಜಿಸಿತು.