ವಿಧಾನಸೌಧ ಮುಂದೆ ಯುವಕರ ಹೊಡೆದಾಟ: ಪ್ರಕರಣ ದಾಖಲು
ಬೆಂಗಳೂರು, ಸೆ.20: ಯುವತಿಯೊಂದಿಗೆ ಬೈಕ್ನಲ್ಲಿ ಬಂದ ಯುವಕನ ಮೇಲೆ ಗುಂಪೊದು ಏಕಾಏಕಿ ದಾಳಿ ನಡೆಸಿರುವ ಘಟನೆ ವಿಧಾನಸೌಧದ ಎದುರೇ ನಡೆದಿದ್ದು, ಇದರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯುವತಿ ಜೊತೆ ಬೈಕ್ನಲ್ಲಿ ಬಂದವನ ಮೇಲೆ ಮೂವರು ಯುವಕರು ಸುತ್ತುವರೆದು ದಾಳಿ ನಡೆಸಿ ನಡುರಸ್ತೆಯಲ್ಲಿಯೇ ಹೊಡೆದಾಡಿಕೊಂಡು ಯುವತಿಯ ಮೇಲೂ ಹಲ್ಲೆ ನಡೆಸಲಾಗಿದೆ.
ಹುಡುಗಿ ವಿಚಾರವಾಗಿ ಯುವಕರ ಗುಂಪು ಗಲಾಟೆ ಮಾಡಿದ್ದು, ಸೋಮವಾರ ತಡ ರಾತ್ರಿ ನಡೆದಿದೆ ಎನ್ನಲಾಗಿದೆ.
ಈ ಸಂಬಂಧ ಕೇಂದ್ರ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
Next Story