ನ.17: ಮಲೆನಾಡು ಗಲ್ಫ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ "ಮಲೆನಾಡ ಸಂಗಮ-2022"
ರಿಯಾದ್, ಸೆ.21: ಮಲೆನಾಡು ಗಲ್ಫ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ "ಮಲೆನಾಡ ಸಂಗಮ-2022" ರಿಯಾದ್ ನಲ್ಲಿ ನ. 17ರಂದು ನಡೆಯಲಿದೆ.
ಎಂ.ಜಿ.ಟಿ. ರಿಯಾದ್ ಘಟಕ ಪ್ರಸ್ತುತಪಡಿಸುವ "ಮಲೆನಾಡ ಸಂಗಮ-2022"ದಲ್ಲಿ ರಸಪ್ರಶ್ನೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.
ಸೆ.9 ರಂದು ಜಿದ್ದಾದಲ್ಲಿ ನಡೆದ ಜಿದ್ದಾ ಮೀಟ್ ಎಂಜಿಟಿ ಕೇಂದ್ರ ಸಮಿತಿಯ ತ್ರೈಮಾಸಿಕ ಸಭೆಯಲ್ಲಿ ರಿಯಾದ್ ನಲ್ಲಿ ನಡೆಸಲಿಚ್ಚಿಸಿರುವ "ಮಲೆನಾಡ ಸಂಗಮ-2022" ಲಾಂಚನವನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಸತ್ತಾರ್, ಗೌರವಾಧ್ಯಕ್ಷರಾದ ಶರೀಫ್ ಸಾಂಕೋನ್, ಖಜಾಂಚಿ ಬಶೀರ್ ಬಾಳುಪೇಟೆ, ಉಪಾಧ್ಯಕ್ಷರುಗಳಾದ ಶಮೀಮ್, ಸಿದ್ದೀಕ್ ಕೊಡ್ಲಿಪೇಟೆ, ಜಲಾಲ್ ಬೇಗ್, ಹಿರಿಯ ಸಲಹೆಗಾರರಾದ ಫಾರೂಖ್ (ಅರಬ್ ಎನರ್ಜಿ), ಸಿರಾಜ್ ಚಕ್ಕಮಕ್ಕಿ, ಅಂತರರಾಷ್ಟ್ರೀಯ ಸಂಯೋಜಕರಾದ ಇಕ್ಬಾಲ್ ಗಬ್ಗಲ್, ಜಿದ್ದಾ ಘಟಕದ ಅಧ್ಯಕ್ಷರಾದ ಮುಶ್ತಾಕ್ ಗಬ್ಗಲ್, ರಿಯಾದ್ ಘಟಕದ ಅಧ್ಯಕ್ಷರಾದ ನಝೀರ್ ಜಯಪುರ, ಜುಬೈಲ್ ಘಟಕದ ಅಧ್ಯಕ್ಷರಾದ ಅಬೂಬಕ್ಕರ್ ಹಂಡುಗುಳಿ, ದಮ್ಮಾಮ್ ಘಟಕದ ಅಧ್ಯಕ್ಷರಾದ ಬಶೀರ್ ಬಾಳುಪೇಟೆ ಹಾಗೂ ಕೇಂದ್ರ ಸಮಿತಿಯ ಸದಸ್ಯರು ಅನಾವರಣಗೊಳಿಸಿದರು.
ನ.17ರಂದು ನಡೆಯುವ "ಮಲೆನಾಡ ಸಂಗಮ-2022" ಕಾರ್ಯಕ್ರಮಕವು ರಿಯಾದ್ ನ ರಿಮಾಲ್ ಜಿಲ್ಲೆಯ ಇಸ್ತಿರಾಹ ಎಲೆಕ್ಟ್ರೋನಿಯದಲ್ಲಿ ನಡೆಯಲಿದೆ. ತಾಯ್ನಾಡಿನಿಂದ ರಾಷ್ಟ್ರೀಯ ಸಮಿತಿಯ ನೇತಾರರೂ ಮತ್ತು ಹಿರಿಯರೂ ಆಗಮಿಸಲಿರುವರು. ಸರ್ವರಿಗೂ ಆದರದ ಸ್ವಾಗತವನ್ನು ಕೋರುವುದಾಗಿ ಎಂಜಿಟಿ ಕೇಂದ್ರ ಸಮಿತಿ ಸೌದಿ ಅರೇಬಿಯ ಪ್ರಕಟನೆಯಲ್ಲಿ ತಿಳಿಸಿದೆ.