ನಿಯಮ ಉಲ್ಲಂಘನೆ ಆರೋಪ: 'ಸೈಮಾ ಅವಾರ್ಡ್' ಆಯೋಜಕರ ವಿರುದ್ಧ FIR ದಾಖಲು
ತಡರಾತ್ರಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟ ಯಶ್, ಅಭಿಷೇಕ್ ಅಂಬರೀಷ್
ಬೆಂಗಳೂರು, ಸೆ.21- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಸೈಮಾ ಅವಾರ್ಡ್ 2022 (ದಕ್ಷಿಣ ಭಾರತದ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ) ಬಳಿಕ ಆಯೋಜಿಸಿದ್ದ ಅದ್ದೂರಿ ಪಾರ್ಟಿಯ ಆಯೋಜಕರ ವಿರುದ್ಧ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಪ್ರತಿಷ್ಠಿತ ಜೆಡಬ್ಲ್ಯೂ ಹೋಟೆಲ್ನಲ್ಲಿ ಈ ಪಾರ್ಟಿ ನಡೆದಿದ್ದು ಕಾನೂನು ಉಲ್ಲಂಘಿಸಿ ರಾತ್ರಿ 3.30 ಗಂಟೆಯ ವರೆಗೂ ಪಾರ್ಟಿ ಆಯೋಜಿಸಲಾಗಿತ್ತು.ಈ ಸಂಬಂಧಿಸಿದಂತೆ ಆಯೋಜಕರ ವಿರುದ್ಧ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾರ್ಟಿಯಲ್ಲಿ ವಿವಿಧ ಭಾಷೆಯ ನಟ - ನಟಿಯರು ಭಾಗಿಯಾಗಿದ್ದರು. ರಾತ್ರಿ 3.30ರ ತನಕ ಅಬ್ಬರದ ಸಂಗೀತಕ್ಕೆ ಹೆಜ್ಜೆ ಹಾಕಿದ್ದರು. ಜತೆಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಅಭಿಷೇಕ್ ಅಂಬರೀಶ್ ಅವರು ಪಾರ್ಟಿಯಲ್ಲಿದ್ದ ವಿಡಿಯೊ ಒಂದು ವೈರಲ್ ಆಗಿತ್ತು.
Next Story