ವಿಟ್ಲ | ರಸ್ತೆ ಅಪಘಾತ: ಮಗು ಸಹಿತ ಮೂವರಿಗೆ ಗಾಯ
ಬಂಟ್ವಾಳ, ಸೆ.23: ಬೊಲೇರೊ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತ(Accident)ದಲ್ಲಿ ಮಗು ಸಹಿತ ಮೂವರು ಗಾಯಗೊಂಡ ಘಟನೆ ವಿಟ್ಲ-ಪುತ್ತೂರು ರಸ್ತೆಯ ಉರಿಮಜಲು ಎಂಬಲ್ಲಿ ನಡೆದಿದೆ.
ಬೈಕಿನಲ್ಲಿದ್ದ ಕನ್ಯಾನ ನಿವಾಸಿಗಳಾದ ಸವಾರ, ಮಹಿಳೆ ಮತ್ತು ಮಗು ಗಂಭೀರ ಗಾಯಗೊಂಡಿದೆ. ಗಾಯಾಳುಗಳನ್ನು ತಕ್ಷಣವೇ ಡಿ ಗ್ರೂಪ್ ಆ್ಯಂಬುಲೆನ್ಸ್ ಮೂಲಕ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ತೂರು ಕಡೆಯಿಂದ ವಿಟ್ಲದತ್ತ ತೆರಳುತ್ತಿದ್ದ ಬೈಕ್ ಮತ್ತು ಪುತ್ತೂರು ಕಡೆಗೆ ತೆರಳುತ್ತಿದ್ದ ಬೊಲೇರೊ ನಡುವೆ ಈ ಅಪಘಾತ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಜೀಪಿನಡಿಗೆ ನುಗ್ಗಿದ್ದು, ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಇದನ್ನೂ ಓದಿ: ಹನೂರು | ಹಸು ಮೇಯಿಸಲು ತೆರಳಿದ್ದ ರೈತ ಚಿರತೆ ದಾಳಿಗೆ ಬಲಿ
Next Story