varthabharthi


ಉಡುಪಿ

ಅಜ್ಜಿನಡ್ಕ: ದಾಖಲೆಪತ್ರಗಳ ಹಸ್ತಾಂತರ

ವಾರ್ತಾ ಭಾರತಿ : 23 Sep, 2022

ಮಂಗಳೂರು, ಸೆ.23: ಅಜ್ಜಿನಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದ 8 ಸೆಂಟ್ಸ್ ಜಮೀನನ್ನು ಶಾಲಾ ಸ್ಥಾಪಕ ಸದಸ್ಯ ಹಾಗೂ ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಮತ್ತು ಶಾಲೆಗೆ ಸ್ವಂತ ಜಮೀನು ಹೊಂದಲು ಅವಿಶ್ರಾಂತ ಶ್ರಮಿಸಿದ್ದ ಯುಎನ್ ಅಬ್ದುಲ್ಲ ಹಾಜಿ ಅನಾರೋಗ್ಯದಲ್ಲಿರುದರಿಂದ ಅವರು ಪರವಾಗಿ ಪುತ್ರ ಅಬ್ದುಲ್ ಸತ್ತಾರ್ ಮದನಿ ಜಮೀನಿಗೆ ಸಂಬಂಧಿಸಿದ ದಾಖಲೆಪತ್ರಗಳನ್ನು ಹಸ್ತಾಂತರಿಸಿದರು.

8 ಸೆಂಟ್ಸ್ ಜಮೀನನ್ನು ಶಾಲೆಯ ಹೆಸರಿಗೆ ರಿಜಿಸ್ಟ್ರಾರ್ ಮಾಡಿಸಿದ ದಾಖಲೆ ಪತ್ರಗಳನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಎಚ್, ಶಾಲೆಯ ಮುಖ್ಯಶಿಕ್ಷಕಿ ರಝಿಯಾ ಸ್ವೀಕರಿಸಿದರು.

ಈ ಸಂದರ್ಭ ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾದ ಅಹ್ಮದ್ ಅಜ್ಜಿನಡ್ಕ, ಅಹ್ಮದ್ ಇಸಾಕ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾತೀಷ್ ಅಜ್ಜಿನಡ್ಕ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)