ಬೆಳ್ತಂಗಡಿಯಲ್ಲೂ 'PAYCM' ಪೋಸ್ಟರ್ ಪ್ರತ್ಯಕ್ಷ !
ಬೆಳ್ತಂಗಡಿ, ಸೆ.23: ರಾಜ್ಯ ರಾಜಧಾನಿಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿರುವ 'PAYCM' ಕ್ಯೂಆರ್ ಕೋಡ್ ಪೋಸ್ಟರ್ ಇದೀಗ ಬೆಳ್ತಂಗಡಿಯಲ್ಲೂ ಪ್ರತ್ಯಕ್ಷವಾಗಿದೆ.
ನಗರದ ವಿವಿಧೆಡೆಗಳಲ್ಲಿ ಶುಕ್ರವಾರ ರಾತ್ರಿ PAYCM ಪೋಸ್ಟರ್ ಗಳನ್ನು ಅಂಟಿಸಿರುವುದು ಕಂಡುಬಂದಿತ್ತು. ಆದರೆ ಬೆಳಗ್ಗಿನ ವೇಳೆ ಈ ಪೋಸ್ಟರ್ ಗಳೆಲ್ಲವೂ ಮಾಯವಾಗಿದೆ.
ಬೆಳ್ತಂಗಡಿಯ ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಪೋಸ್ಟರ್ ಗಳನ್ನು ಅಂಟಿಸಲಾಗಿತ್ತು, ಸಂತೆಕಟ್ಟೆ ಬಸ್ ನಿಲ್ದಾಣದಲ್ಲಿ, ಚರ್ಚ್ ರೋಡಿನ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಇಂತಹ ಪೋಸ್ಟರ್ ಗಳನ್ನು ಅಂಟಿಸಲಾಗಿತ್ತು. ಪೋಸ್ಟರ್ ಗಳನ್ನು ಅಂಟಿಸಿದ ಕಾಂಗ್ರೆಸ್ ಕಾರ್ಯಕರ್ತರು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ, ಅದು ಎಲ್ಲೆಡೆ ವೈರಲ್ ಆಗುತ್ತಿದೆ. ಆದರೆ ಶನಿವಾರ ಬೆಳಗ್ಗಿನ ವೇಳೆಗೆ ನಗರದಲ್ಲಿ PAYCMನ ಒಂದು ಪೋಸ್ಟರ್ ಇಲ್ಲದ ರೀತಿಯಲ್ಲಿ ಎಲ್ಲವನ್ನೂ ತೆರವುಗೊಳಿಸಲಾಗಿತ್ತು.
ಇದನ್ನೂ ಓದಿ: ಮುಂದುವರಿದ 'PAYCM' ಪೋಸ್ಟರ್ ಅಭಿಯಾನ: ಕಾಂಗ್ರೆಸ್ ನಾಯಕರು ವಶಕ್ಕೆ, ಸಿಎಂ ನಿವಾಸಕ್ಕೆ ಭದ್ರತೆ