varthabharthi


ಉಡುಪಿ

ಸಾಮಾಜಿಕ ಚಳುವಳಿ ರೂಪಿಸುವುದು ಇಂದಿನ ಸವಾಲು: ಗಿಳಿಯಾರು

ವಾರ್ತಾ ಭಾರತಿ : 24 Sep, 2022

ಕುಂದಾಪುರ, ಸೆ.24: ಶೋಷಿತ ವರ್ಗಗಳ ಸಂವಿಧಾನ ಬದ್ದ ಹಕ್ಕುಗಳಿಗಾಗಿ ಸಾಮಾಜಿಕ ಚಳುವಳಿ ರೂಪಿಸು ವುದು ಇಂದಿನ ಕಾಲಘಟ್ಟದಲ್ಲಿ ಒಂದು ರೀತಿಯ ಸವಾಲುಗಳಾಗಿ ಪರಿಣಮಿಸುತ್ತಿದೆ. ಅಂಬೇಡ್ಕರ್ ಕೊಟ್ಟ ಮೀಸಲಾತಿ ಯಿಂದ ಉನ್ನತ ಹುದ್ದೆಯನ್ನು ಅಲಂಕರಿಸಿಕೊಂಡ ಸಮುದಾಯದವರು ಚಳುವಳಿಯತ್ತ ಮುಖ ಮಾಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಪ್ರಧಾನ ಸಂಘಟನಾ ಸಂಚಾಲಕ ನ್ಯಾಯ ವಾದಿ ಮಂಜುನಾಥ ಗಿಳಿಯಾರು ಹೇಳಿದ್ದಾರೆ.

ದಸಂಸ ಯಡಮೊಗ್ಗೆ ಗ್ರಾಮ ಶಾಖೆಯ ಮೊದಲ ವರ್ಷದ ವಾರ್ಷಿಕ ಮಹೋತ್ಸವದ ಅಂಗವಾಗಿ ಯಡಮೊಗೆ ಸಿದ್ದಿ ವಿನಾಯಕ ಭಜನ ಮಂದಿರದಲ್ಲಿ ಹಮ್ಮಿಕೊಂಡ ಜನಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿ ದ್ದರು. ಗ್ರಾಮೀಣ ಭಾಗದಿಂದ ಸಂಘಟನೆಗೆ ಬರುವವರು ಕೆಲವು ಆಶಾ ಭಾವನೆಗಳೊಂದಿಗೆ ಬರುತ್ತಾರೆ. ಅವರ ಕೊರತೆಯನ್ನು ನೀಗಿಸಿ ಅಂಬೇಡ್ಕರ್ ವಿಚಾರ ಧಾರೆಯ ಅರಿವನ್ನು ಜನರಲ್ಲಿ ಮೂಡಿಸಲು ಸಂಘಟನೆಯ ಕಾರ್ಯ ಕರ್ತರು ಅವಿರತ ಶ್ರಮವಹಿಸಿದಲ್ಲಿ ಮಾತ್ರ ಚಳುವಳಿಯನ್ನು ಬಲಪಡಿಸಲು ಸಾದ್ಯ. ದೇಶದ ಇಡೀ ಸಾಮಾಜಿಕ ವ್ಯವಸ್ಥೆಯೇ ಇವತ್ತು ಖಾಸಗಿಕರಣಕ್ಕೆ ಮಾರಟವಾಗುತ್ತಿರುವಾಗ ಪ್ರಜ್ಞಾವಂತ ಯುವ ಮನಸ್ಸುಗಳು ಎಚ್ಚೆತ್ತು  ಸಮುದಾಯಗಳ ಸಾಮಾಜಿಕ ಹಕ್ಕುನ್ನು ಕಾಯ್ದುಕೊಳ್ಳಲು ಅಂಬೇಡ್ಕರ್ ವಿಚಾರ ಧಾರೆಯಲ್ಲಿ ಚಳುವಳಿ ಗಟ್ಟಿ ಗೊಳಿಸಬೇಕಾಗಿದೆ ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಮಾನಂಜೆ ಸಹಕಾರಿ ಸಂಘದ  ಹಿರಿಯ ವ್ಯವಸ್ಥಾಪಕ ಮಂಜುನಾಥ ನಾಯ್ಕ, ಪ್ರಗತಿಪರ ಕೃಷಿಕ ಅಂತು ನಾಯ್ಕ,  ಖ್ಯಾತ ಯಕ್ಷಗಾನ ಭಾಗವತ ಗಣೇಶ ನಾಯ್ಕ, ಹವ್ಯಾಸಿ ಚಿತ್ರ ಕಲೆಗಾರ ಶೇಖರ ಬೆಳಾರಿ, ಯುವ ಶಿಲ್ಪ ಕಲೆಗಾರ ಪ್ರತಿಭೆ ಚೇತನ್ ನಾಯ್ಕ ಅವರನ್ನು ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು ಪುರಸ್ಕರಿಸಿ ಸನ್ಮಾನಿಸಿದರು.

ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಗೈದರು. ಅಧ್ಯಕ್ಷತೆಯನ್ನು ಸಮಿತಿಯ ಸಂಚಾಲಕ ಭಾಸ್ಕರ ನಾಯ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶೇಖರ ಪೂಜಾರಿ, ಜಯ ರಾಮ ಮಂಗನಮಕ್ಕಿ, ಆನಂದ ಬೆಳಾರಿ ಮೊದಲಾದವರು ಉಪಸ್ಥರಿದ್ದರು. ಉದಯ ನಾಯ್ಕ ಸ್ವಾಗತಿಸಿದರು. ಗಣೇಶ್ ನಾಯ್ಕ  ನಿರೂಪಿಸಿ, ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)