varthabharthi


ಉಡುಪಿ

ಉಡುಪಿ: ಸೆ.26ರಿಂದ ‘ವಿಶ್ವವಜ್ರ’ ಡೈಮಂಡ್ ಪ್ರದರ್ಶನ- ಮಾರಾಟ

ವಾರ್ತಾ ಭಾರತಿ : 24 Sep, 2022

ಉಡುಪಿ, ಸೆ.೨೪: ಉಡುಪಿಯ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ ದಕ್ಷಿಣ ಭಾರತದ ಅಗ್ರಗಣ್ಯ ಡೈಮಂಡ್ ಜ್ಯುವೆಲ್ಸರಿ ಪ್ರದರ್ಶನ ಮತ್ತು ಮಾರಾಟ ‘ವಿಶ್ವವಜ್ರ’ ಸೆ.26ರಿಂದ ಅ.9ರವರೆಗೆ ಹಮ್ಮಿಕೊಳ್ಳಲಾಗಿದೆ.

ಸೆ.26ರಂದು ಸಂಜೆ ೪ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಆನಂದ್ ಸಿ. ಕುಂದರ್, ಸಾಧು ಸಾಲಿಯಾನ್, ಡಾ.ಪ್ರಕಾಶ್ ಸಿ.ತೊಲಾರ್, ಮಲ್ಪೆ ಜಾಮೀಯ ಮಸೀದಿ ಅಧ್ಯಕ್ಷ ಖತೀಬ್ ರಶೀದ್, ಬಶೀರ್ ತೌಫೀಕ್, ಪವರ್ ಅಧ್ಯಕ್ಷೆ ಪೂನಂ ಶೆಟ್ಟಿ, ಸರಿತಾ ಸಂತೋಷ್, ಯಾಸ್ಮಿನ್ ತೋಟ ಭಾಗವಹಿಸ ಲಿರುವರು.

ಇಟಲಿ, ಫ್ರಾನ್ಸ್, ಟರ್ಕಿ, ಬೆಲ್ಜಿಯಂ, ಯುಎಸ್, ಸಿಂಗಾಪುರ್ ಮತ್ತು ಮಧ್ಯಪ್ರಾಚ್ಯದ ವಿಶೇಷ ಅಂತಾರಾಷ್ಟ್ರೀಯ ಸಂಗ್ರಹಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ. ಪ್ರದರ್ಶನದಲ್ಲಿ ಡೈಮಂಡ್‌ನ ಪ್ರತಿ ಕ್ಯಾರೆಟ್ ಮೇಲೆ 8000 ರೂ. ರಿಯಾಯಿತಿಯನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು