varthabharthi


ಉಡುಪಿ

ಶಂಕರನಾರಾಯಣ: ಮಗನಿಂದ ತಾಯಿಯ ಕೊಲೆ; ಪ್ರಕರಣ ದಾಖಲು

ವಾರ್ತಾ ಭಾರತಿ : 24 Sep, 2022

ಶಂಕರನಾರಾಯಣ, ಸೆ.24: ಮಗನೇ ತನ್ನ ತಾಯಿಯನ್ನು ಹೊಡೆದು ಕೊಲೆ ಮಾಡಿರುವುದಾಗಿ ಮಗಳು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು 76 ಹಾಲಾಡಿ ಗ್ರಾಮದ ಕಾಸಾಡಿ ಕಾರಿಮನೆ ನಿವಾಸಿ ಪಾರ್ವತಿ (47) ಎಂದು ಗುರುತಿಸಲಾಗಿದೆ. ಇವರು ತನ್ನ ಮಗ ಕೃಷ್ಣ ನಾಯ್ಕ  ಜೊತೆ ವಾಸವಾಗಿದ್ದು, ಕೃಷ್ಣ ನಾಯ್ಕ  ಪ್ರತಿದಿನ ಕುಡಿದು ಬಂದು ತಾಯಿ ಜೊತೆ ಗಲಾಟೆ ಮಾಡಿ ಹೊಡೆಯುತ್ತಿದ್ದನು. ಅದೇ ರೀತಿ ಸೆ.19ರಂದು ಕೃಷ್ಣ ನಾಯ್ಕ ತಾಯಿ ಪಾರ್ವತಿ ಅವರ ತಲೆಗೆ  ಹೊಡೆದು ಸಾಯಿಸಿರುವುದಾಗಿ ಮಗಳು ಶ್ರೀಮತಿ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ.

ಆರಂಭದಲ್ಲಿ ಮೃತರ ಇನ್ನೋರ್ವ ಮಗ ಪವನ್ ಎಂಬಾತ ದೂರು ನೀಡಿದ್ದು, ವಿಪರೀತ ಕುಡಿಯುವ ತಾಯಿ, ಸೆ.18 ರಂದು ಕೆಲಸ ಮುಗಿಸಿ ಮನೆಗೆ ಮದ್ಯಪಾನ ಮಾಡಿಕೊಂಡು ಬಂದಿದ್ದು, ಬಳಿಕ ಕುಡಿದ ಅಮಲಿನಲ್ಲಿ ತೂರಾಡಿಕೊಂಡು ಹೋಗಿ ರುಬ್ಬುವ ಕಲ್ಲಿನ ಮೇಲೆ ಬಿದ್ದು ಗಾಯಗೊಂಡರು ಎಂದು ತಿಳಿಸಿದ್ದನು.

ತಲೆಗೆ ತೀವ್ರವಾದ ಗಾಯಗೊಂಡ ತಾಯಿ ಮಂಗಳೂರು ವೆನ್ಲಾಕ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೆ.22ರಂದು ಮಧ್ಯರಾತ್ರಿ ಮೃತಪಟ್ಟಿರುವುದಾಗಿ ದೂರಲಾಗಿತ್ತು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು. ಇದೀಗ ಮಗಳು ನೀಡಿದ ದೂರಿನಿಂದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)