ಪಿಎಫ್ಐ ನಿಷೇಧ ಚುನಾವಣೆಯ ಸ್ಟಂಟ್: ಬಿ.ಕೆ ಹರಿಪ್ರಸಾದ್
''ಗುಜರಾತ್ ಚುನಾವಣೆ ಬಂದಾಗ ಮಾತ್ರ ಮೋದಿಗೆ ಕೊಲೆ ಬೆದರಿಕೆ ಬರುತ್ತದೆ''
ಬೆಂಗಳೂರು: ಮುಂದಿನ ಐದು ವರ್ಷಗಳ ಅವಧಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯನ್ನು ನಿಷೇಧಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದ್ದು, 'ಪಿಎಫ್ಐ ನಿಷೇಧ ಚುನಾವಣೆಯ ಸ್ಟಂಟ್ ಅಷ್ಟೇ' ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 'ಪ್ರಧಾನಿ ನರೇಂದ್ರ ಮೋದಿಗೆ ಬೆದರಿಕೆ ಇರುವುದರಿಂದ ಪಿಎಫ್ಐ ನಿಷೇಧ ಮಾಡಿರುವುದಾಗಿ ಕಾರಣಗಳನ್ನ ಕೊಟ್ಟಿದ್ದಾರೆ. ಗುಜರಾತ್ ಚುನಾವಣೆ ಬಂದಾಗ ಮಾತ್ರ ಮೋದಿಗೆ ಕೊಲೆ ಬೆದರಿಕೆ ಬರುತ್ತದೆ' ಎಂದು ಟೀಕಿಸಿದರು.
''ಅನುಕಂಪ ಗಿಟ್ಟಿಸಿಕೊಳ್ಳಲು ಪಿಎಫ್ಐ ನಿಷೇಧ ಮಾಡಿದ್ದಾರೆ. ಇಷ್ಟು ವರ್ಷ ಅಧಕಾರದಲ್ಲಿದ್ದರೂ ಕೈಗೆ ಗೋರಂಟಿ ಹಾಕಿಕೊಂಡಿದ್ದರೇ? ಎಂದು ಪ್ರಶ್ನಿಸಿದ ಅವರು, ಇದು ಚುನಾವಣೆಯ ಸ್ಟಂಟ್ ಅಷ್ಟೇ' ಎಂದು ಕಿಡಿಕಾರಿದರು.
ಇದನ್ನೂ ಓದಿ: ಪಿಎಫ್ ಐ ಮಾತ್ರವೇಕೆ, ಆರೆಸ್ಸೆಸ್ ಅನ್ನು ಕೂಡ ನಿಷೇಧಿಸಬೇಕು: ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್
Next Story