ಗುಂಡ್ಲುಪೇಟೆಯಲ್ಲಿ ರೈತರಿಂದ 'ಪೇ ಫಾರ್ಮರ್' ಪೋಸ್ಟರ್ ಅಭಿಯಾನ
ಚಾಮರಾಜನಗರ: ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ 'ಪೇ ಸಿಎಂ' ಎಂಬ ಪೋಸ್ಟರ್ ಬಾರಿ ಸದ್ದು ಮಾಡಿತ್ತು. ಈಗ ರೈತ ಸಂಘದಿಂದ 'ಪೇ ಫಾರ್ಮರ್' ಎಂಬ ಪೋಸ್ಟರ್ ಅಭಿಯಾನ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಶುರುವಾಗಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದ ಕಟ್ಟಡದ ಗೋಡೆಗಳ ಮೇಲೆ 'ಪೇ ಫಾರ್ಮರ್' ಎಂಬ ಪೋಸ್ಟರ್ ಗಳನ್ನ ಅಂಟಿಸಿದ ರೈತ ಸಂಘ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
"ರಾಜ್ಯದಲ್ಲಿ ಯಾರೇ ಅಧಿಕಾರಕ್ಕೆ ಬಂದ್ರು ರೈತರ ಶೋಷಣೆ ತಪ್ಪಿದ್ದಲ್ಲ. ಯಾವ ಸರ್ಕಾರಕ್ಕೂ ರೈತರ ಸಮಸ್ಯೆಯನ್ನು ಬಗೆಹರಿಸುವ ಇಚ್ಚಾಶಕ್ತಿಯೇ ಇಲ್ಲ. ಕೆಲವರು ಅಧಿಕಾರ ದಾಹಕ್ಕೆ ರಾಜ್ಯದ ಚುಕ್ಕಾಣಿ ಹಿಡಿಯಲು ಅಂಬಲಿಸುತ್ತಾರೆಯೇ ಹೊರತು ರಾಜ್ಯದ ರೈತರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ಮನಸ್ಸು ಮಾಡೋದಿಲ್ಲ. ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಕೊಡಿಸಿ" ಎಂದು ರೈತ ಮುಖಂಡ ಶಿವಪುರ ಮಹದೇವಪ್ಪ ಕಿಡಿಕಾರಿದರು.
Next Story