ಟ್ವೆಂಟಿ-20 ವಿಶ್ವಕಪ್ ಗಾಗಿ ಆಸ್ಟ್ರೇಲಿಯಕ್ಕೆ ಪ್ರಯಾಣಿಸಿದ ಟೀಮ್ ಇಂಡಿಯಾ
Photo:twitter
ಹೊಸದಿಲ್ಲಿ: ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಮುಂಬರುವ ಐಸಿಸಿ ಪುರುಷರ ಟ್ವೆಂಟಿ-20 ವಿಶ್ವಕಪ್ ನಲ್ಲಿ ಭಾಗವಹಿಸಲು ಗುರುವಾರ ಮುಂಜಾನೆ ಆಸ್ಟ್ರೇಲಿಯಾಕ್ಕೆ ತೆರಳಿದೆ.
ಕಳೆದ ವರ್ಷ ನಡೆದ ಟಿ-20 ವಿಶ್ವಕಪ್ ನಲ್ಲಿ ಸೆಮಿಫೈನಲ್ ತಲುಪಲು ವಿಫಲವಾಗಿರುವ 2007 ರ ಚಾಂಪಿಯನ್ ಭಾರತ ಈ ವರ್ಷ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದೆ. ವಿಶ್ವಕಪ್ಗೆ ತೆರಳುವ ಮೊದಲು, ಆಯಾ ದ್ವಿಪಕ್ಷೀಯ ಸರಣಿಗಳಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾವನ್ನು ಸೋಲಿಸಿದೆ. ಭಾರತವು ಈ ಬಾರಿಯ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಮೂಡಿಸಿದೆ.
ಟಿ 20 ವಿಶ್ವಕಪ್ಗೆ ಇಡೀ ಟೀಮ್ ಇಂಡಿಯಾ ತಂಡವು ನಿರ್ಗಮಿಸುವ ಚಿತ್ರವನ್ನು ಬಿಸಿಸಿಐನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳು ಪೋಸ್ಟ್ ಮಾಡಿದೆ.
ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಅವರಂತಹ ಸ್ಟಾರ್ಗಳು ಕೂಡಾ ಆಸ್ಟ್ರೇಲಿಯಾಕ್ಕೆ ನಿರ್ಗಮಿಸುವ ತಂಡದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಭಾರತವು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟ್ವೆಂಟಿ-20 ಸರಣಿಯನ್ನು ತವರು ನೆಲದಲ್ಲಿ ಗೆದ್ದಿರಬಹುದು, ಆದಾಗ್ಯೂ, ಜಸ್ ಪ್ರೀತ್ ಬುಮ್ರಾ ಟೂರ್ನಿಯಿಂದ ಹೊರಗುಳಿದಿರುವ ಕಾರಣ ಡೆತ್ ಬೌಲಿಂಗ್ ರೋಹಿತ್ ಬಳಗಕ್ಕೆ ದೊಡ್ಡ ಚಿಂತೆಯಾಗಿ ಪರಿಣಮಿಸಿದೆ.
Australia bound . Exciting times ahead. @yuzi_chahal @HarshalPatel23 pic.twitter.com/KtmertwefU
— Virat Kohli (@imVkohli) October 6, 2022