ಬೀದರ್ | ಮಹಮೂದ್ ಗವಾನ್ ಮದರಸಾ ಆವರಣಕ್ಕೆ ಅಕ್ರಮ ಪ್ರವೇಶ, 'ಜೈ ಶ್ರೀ ರಾಮ್' ಘೋಷಣೆ: 9 ಮಂದಿ ವಿರುದ್ಧ FIR
ಬೀದರ್: ಇಲ್ಲಿನ ಐತಿಹಾಸಿಕ ಮಹಮೂದ್ ಗವಾನ್ ಮದರಸಾ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ, 'ಜೈ ಶ್ರೀ ರಾಮ್' ಘೋಷಣೆ ಕೂಗಿದ್ದಲ್ಲದೆ, ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕಿರುವ ಆರೋಪಕ್ಕೆ ಸಂಬಂಧಿಸಿ 9 ಮಂದಿ ವಿರುದ್ಧ ಬೀದರ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಧವಾರ ತಡ ರಾತ್ರಿ ದಸರಾ ಮೆರವಣಿಗೆಯಲ್ಲಿದ್ದ ನೂರಾರು ಮಂದಿಯ ಗುಂಪೊಂದು "ಜೈ ಶ್ರೀ ರಾಮ್" ಎಂಬ ಘೋಷಣೆಗಳನ್ನು ಕೂಗಿ ಮಹಮೂದ್ ಗವಾನ್ ಮದರಸಾ ಆವರಣದ ಬೀಗ ಮುರಿದು ಅಕ್ರಮವಾಗಿ ಪ್ರವೇಶಿಸಿದೆ. ಬಳಿಕ ಅಲ್ಲಿದ್ದ ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಬೀದರ್ ಪಟ್ಟಣ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು.
ಇದೀಗ ಆರೋಪಿಗಳಾದ ನರೇಶ್ ಗೌಳಿ, ಪ್ರಕಾಶ್ ಮೆಕಾನಿಕ್, ಸಂಜು ಟೈಲರ್, ಅರುಣ್ ಗೌಳಿ, ಮುನ್ನ, ಸಾಗರ್, ಜಗದೀಶ್, ಗಣೇಶ್ ಗೌಳಿ ಹಾಗೂ ಗೊರಕ ಗೌಳಿ ಸೇರಿ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
Next Story