ಬಂಟ್ವಾಳ: ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸ್ಥಳದಲ್ಲೇ ಮೃತ್ಯು
ಬಂಟ್ವಾಳ, ಅ.7: ಅಲ್ಯೂಮಿನಿಯಂ ಕೊಕ್ಕೆ ಬಳಸಿ ತೆಂಗಿನಕಾಯಿ ಕೀಳುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೇಪು ನಿರ್ಕಾಜೆಯಲ್ಲಿ ಶುಕ್ರವಾರ ನಡೆದಿದೆ.
ಕೇಪು ನಿರ್ಕಾಜೆ ನಿವಾಸಿ ಶೀನ ಗೌಡ (58) ಮೃತರು ಎಂದು ತಿಳಿದುಬಂದಿದೆ.
ಇವರು ಮೊದಲು ವಿಟ್ಲದ ಕೂಡೂರಿನಲ್ಲಿ ವಾಸವಾಗಿದ್ದು ಪ್ರಸಕ್ತ ನಿರ್ಕಾಜೆಯಲ್ಲಿ ವಾಸವಾಗಿದ್ದರು. ನೆರೆಮನೆಯ ಅಲ್ಯೂಮಿನಿಯಂ ಕೊಕ್ಕೆ ಬಳಸಿ ತೆಂಗಿನಕಾಯಿ ಕೀಳುತ್ತಿರುವಾಗ ವಿದ್ಯುತ್ ತಂತಿ ತಗುಲಿದ ಪರಿಣಾಮ ಸ್ಥಳದಲ್ಲಿಯೇ ಅವರು ಮೃತಪಟ್ಟರು ಎಂದು ತಿಳಿದು ಬಂದಿದೆ.
Next Story