ಅ.16: ವಾಮಂಜೂರಿನಲ್ಲಿ ಆದಿವಾಸಿ ಭೂಮಿ ಹಕ್ಕು ಸಮಾವೇಶ
ಮಂಗಳೂರು, ಅ.7: ಕರ್ನಾಟಕ ರಾಜ್ಯ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ವಾಮಂಜೂರು ಘಟಕದ ವತಿಯಿಂದ ಭೂಮಿಯ ಹಕ್ಕನ್ನು ಖಾತ್ರಿಗೊಳಿಸುವ ನಿಟ್ಟಿನಲ್ಲಿ ಅ.16ರಂದು ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ಭೂಮಿ ಹಕ್ಕು ಸಮಾವೇಶ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.
ಕರಾವಳಿ ಕರ್ನಾಟಕದ ಮೂಲನಿವಾಸಿಗಳಾದ ಕೊರಗ ಸಮುದಾಯದ ಭೂ ಒಡೆತನದ ಹಕ್ಕು ಮತ್ತು ಮನೆ ನಿವೇಶನದ ಹಕ್ಕುಗಳ ಸಂಬಂಧಿಸಿ ದ.ಕ. ಜಿಲ್ಲಾಡಳಿತ, ಐಟಿಡಿಪಿ ಮತ್ತು ಮಂಗಳೂರು ಮಹಾನಗರ ಪಾಲಿಕೆಯು ಮಲತಾಯಿ ಧೋರಣೆ ಅನುಸರಿಸುತ್ತಿದೆ. ದ.ಕ.ಜಿಲ್ಲೆಯಲ್ಲಿ ಮುಹಮ್ಮದ್ ಫೀರ್ ವರದಿಯ ಅನುಸಾರ ಕೃಷಿಭೂಮಿ ಮಂಜೂರಾತಿಯಲ್ಲಿ ಕಳಪೆ ಸಾಧನೆ ಮಾಡಿದೆ. ಅದೇ ರೀತಿ ಗ್ರಾಪಂ ಮತ್ತು ಸ್ಥಳೀಯ ನಗರಾಡಳಿತ ಸಂಸ್ಥೆಗಳಲ್ಲಿ ಮನೆ ನಿವೇಶನ ಮಂಜೂರಾತಿಯಲ್ಲಿ ಕೊರಗ ಸಮುದಾಯಕ್ಕೆ ನ್ಯಾಯೋಚಿತವಾದ ಪಾಲು ದೊರೆತಿಲ್ಲ. ನಗರದ ಮಂಗಳಜ್ಯೋತಿಯಲ್ಲಿ ದಲಿತೋದ್ಧಾರಕ ಕುದ್ಮುಲ್ ರಂಗರಾವ್‌ರ ಶಿಷ್ಯರೊಬ್ಬರು ಕೊರಗ ಸಮುದಾಯದ ಅಭಿವೃದ್ಧಿಗಾಗಿ ದಾನ ಮಾಡಿರುವ 9 ಎಕರೆ ಭೂಮಿಯಲ್ಲಿ ಮನೆ ನಿವೇಶನ ರಹಿತ 33 ಕೊರಗ ಕುಟುಂಬಗಳಿಗೆ 2018ರಿಂದಲೂ ಮನೆ ನಿವೇಶನ ದಾಖಲಾತಿ ಮತ್ತು ಜಾಗವನ್ನು ಹಸ್ತಾಂತರಿಸದೆ ವಿನಾ ಕಾರಣ ವಿಳಂಬಿಸಲಾ ಗುತ್ತಿದೆ. ಹಾಗಾಗಿ ಮುಂದಿನ ಹಂತದ ಹೋರಾಟದ ರೂಪು ರೇಷೆಗಳನ್ನು ಈ ಸಮಾವೇಶದಲ್ಲಿ ನಿರ್ಧರಿಸಲಾ ಗುವುದು ಎಂದು ಮಂಗಳಜ್ಯೋತಿ ಘಟಕದ ಸಂಚಾಲಕ ಕರಿಯ ಕೆ. ಹೇಳಿಕೆಯಲ್ಲಿ ತಿಳಿಸಿದ್ದಾರೆ.