ಅ.11: ಮಂಗಳೂರಿನಲ್ಲಿ ನೀರು ವ್ಯತ್ಯಯ
ಮಂಗಳೂರು, ಅ.7: ತುಂಬೆ ಎಚ್‌ಎಲ್‌ಪಿಎಸ್ ನಂ-2, 80 ಎಂಎಲ್‌ಡಿ ಸ್ಥಾವರದಲ್ಲಿ ಹಾಗೂ ಎಲ್‌ಎಲ್‌ಪಿಎಸ್ ನಂ-2 ರಲ್ಲಿ ಬಂಟ್ವಾಳ 110ಕೆ.ವಿ ಯಲ್ಲಿ ವಿದ್ಯುತ್ ಸ್ಥಗಿತವಿದ್ದ ಕಾರಣ ಹಾಗೂ ಜಾಕ್‌ವೆಲ್‌ನ ಕಸ ಕಡ್ಡಿಗಳನ್ನು ತೆಗೆದು ಶುಚಿಗೊಳಿಸಲಿರುವುದರಿಂದ ಅ.11ರಂದು ಬೆಳಗ್ಗೆ 6ರಿಂದ 12ರ ಬೆಳಗ್ಗೆ 6ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಹಾಗಾಗಿ ನಗರದ ಪಡೀಲ್, ಮರೋಳಿ, ಮಂಗಳಾದೇವಿ, ಮುಳಿಹಿತ್ತು, ಕಾರ್‌ಸ್ಟ್ರೀಟ್, ಮಣ್ಣಗುಡ್ಡ, ಪಾಂಡೇಶ್ವರ, ಸ್ಟೇಟ್‌ಬ್ಯಾಂಕ್, ಶಕ್ತಿನಗರ, ಕಣ್ಣೂರು, ಬಜಾಲ್, ಜಪ್ಪಿನಮೊಗರು, ಉಲ್ಲಾಸ್‌ನಗರ, ಚಿಲಿಂಬಿ, ಕೋಡಿಕಲ್, ಉರ್ವಸ್ಟೋರ್, ಅಶೋಕನಗರ, ಕುಡುಪು, ವಾಮಂಜೂರು, ಬೋಂದೆಲ್, ಕಾವೂರು, ಮರಕಡದ ಭಾಗಶಃ ಪ್ರದೇಶಗಳಿಗೆ ನೀರು ಸರಬರಾಜನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story