ಮಂಗಳೂರು: ಖಾಲಿ ಚೆಕ್‌ಗಳ ದುರ್ಬಳಕೆ ಆರೋಪ; ಪ್ರಕರಣ ದಾಖಲು
ಮಂಗಳೂರು, ಅ.11: ಸಾಲ ಪಡೆಯುವ ಸಂದರ್ಭ ನೀಡಿದ ಖಾಲಿ ಚೆಕ್‌ಗಳ ಮೂಲಕ ಹಣ ಪಡೆದು ಮಹಿಳೆಯೊಬ್ಬರಿಗೆ 2,45,500 ರೂ. ವಂಚಿಸಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಲ್ಪಾ ಪೂಂಜಾ ಎಂಬವರು ಜೆಪ್ಪು ಶಾಂತಿನಗರದ ಮಂಗಳೂರು ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಸಾಲ ಪಡೆಯುವ ಸಂದರ್ಭ ತಾನು ಖಾತೆ ಹೊಂದಿರುವ ಬ್ಯಾಂಕ್‌ನ ಖಾಲಿ ಚೆಕ್‌ಗಳನ್ನು ನೀಡಿದ್ದರು. ಸೊಸೈಟಿಯ ವ್ಯವಸ್ಥಾಪಕ ಇತರ ಮೂವರು ಆರೋಪಿಗಳ ಜತೆ ಸೇರಿಕೊಂಡು ಆ ಚೆಕ್‌ಗಳ ಮೂಲಕ ಹಣ ಪಡೆದಿದ್ದರು. ಆರೋಪಿಗಳಾದ ಪ್ರಜ್ವಲ್ ಜೋಯೆಲ್ ಫೆರ್ನಾಂಡಿಸ್ ಹೆಸರಿನಲ್ಲಿ ಒಂದು ಚೆಕ್ ಮೂಲಕ 50,000 ರೂ., ರತನ್ ಕುಮಾರ್ ಕೆ. ಹೆಸರಿನಲ್ಲಿ ಒಂದು ಚೆಕ್ ಮೂಲಕ 99,000 ರೂ., ಅಶ್ರಫ್ ಅಬ್ದುಲ್ ಖಾದರ್ ಹೆಸರಿನಲ್ಲಿ ಒಂದು ಚೆಕ್ ಮೂಲಕ 96,500 ರೂ. ಹಣ ಪಡೆದು ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Next Story