ಉಳ್ಳಾಲ ಬ್ಲಾಕ್ ಯೂತ್ ಕಾಂಗ್ರೆಸ್ ವತಿಯಿಂದ ಶಾಸಕ ಯುಟಿ ಖಾದರ್ ಹುಟ್ಟುಹಬ್ಬ ಆಚರಣೆ
ಉಳ್ಳಾಲ: ಉಳ್ಳಾಲ ಬ್ಲಾಕ್ ಯೂತ್ ಕಾಂಗ್ರೆಸ್ ಇದರ ಆಶ್ರಯದಲ್ಲಿ ಶಾಸಕ ಯುಟಿ ಖಾದರ್ ಅವರ ಹುಟ್ಟು ಹಬ್ಬ ಆಚರಣೆಯನ್ನು ಸೋಮೇಶ್ವರದಲ್ಲಿರುವ ಪಶ್ಚಿಮ್ ಚಾರಿಟೇಬಲ್ ಟ್ರಸ್ಟ್ ಆಶ್ರಮದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಆಶ್ರಮದಲ್ಲಿರುವವರಿಗೆ ಮಧ್ಯಾಹ್ನದ ಊಟ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು, ಕಾಂಗ್ರೆಸ್ ಮುಖಂಡರಾದ ರವಿರಾಜ್ ಶೆಟ್ಟಿ, ಯುವ ಕಾಂಗ್ರೆಸ್ ಉಸ್ತುವಾರಿವ ವೈಭವ ಶೆಟ್ಟಿ, ಹಿಂದುಳಿದ ವರ್ಗ ಜಿಲ್ಲಾಧ್ಯಕ್ಷ ವಿಶ್ವಾಸ್ ದಾಸ್, ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಿಕಾ ರೈ,ಜಿಲ್ಲಾ ಮಹಿಳಾ ಕಾಂಗ್ರೆಸ್ ನಾಯಕಿ ಸುರೇಖ ಚಂದ್ರಹಾಸ್, ಉಳ್ಳಾಲ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಿರೋಝ್ ಮಲಾರ್, ಉಪಾಧ್ಯಕ್ಷ ಗೋಪಾಲ ತಂಚಣಿ, ಪ್ರಧಾನ ಕಾರ್ಯದರ್ಶಿಗಳಾದ ಖಲಂದರ್ ಶಾಫಿ, ನಝೀರ್ ಮಡಪಾಡಿ, ನುಶ್ರತ್ ಹರೇಕಳ, ಶಫೀಕ್ ಶಾಂತಿಬಾಗ್ , ಕರ್ನಾಟಕ ರಾಜ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ನಾಸೀರ್ ಅಹ್ಮದ್ ಸಾಮಣಿಗೆ, ಹಿಂದುಳಿದ ವರ್ಗದ ಅಧ್ಯಕ್ಷ ದೀಪಕ್ ಪಿಲಾರ್, ಕಿಸಾನ್ ಘಟಕದ ಅಧ್ಯಕ್ಷ ಪುರುಷೋತ್ತಮ, ಅಲ್ಪಸಂಖ್ಯಾತ ಘಟಕದ ಝಕರಿಯಾ, ಉಳ್ಳಾಲ ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ರಶೀದ್ ಉಳ್ಳಾಲಪಾವೂರ್ ಪಂಚಾಯತ್ ಸದಸ್ಯ ರಿಯಾಝ್ ಅಹ್ಮದ್, ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ಪಿಂಟೋ, ವಿನು ತಲಪಾಡಿ, ವಿನಯ ಕುಮಾರ್ ಶೆಟ್ಟಿ, ಸೆಫಿಯಾ, ಹರೀಶ್, ಪ್ರವೀಣ್, ವಿಶಲ್ ಕೊಲ್ಯ, ರಾಜ ಬಂಡಸಾಲೆ, ರವಿ ಗಾಂಧಿನಗರ, ನವೀನ್ ಬಗಂಬಿಲ, ನೆಲ್ಸನ್, ಭುವನ್, ಸಲೀಂ ಮೇಗ, ಶಾಲಿನಿ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು