ಉಳ್ಳಾಲ: ‘ಕುರ್‌ಆನ್‌ನೆಡೆಗೆ ಮರಳಿರಿ’ ಅಭಿಯಾನ
ಮಂಗಳೂರು, ಅ.19: ಮುಸ್ಲಿಂ ಸಮುದಾಯವು ಅದೃಷ್ಟವಂತ ಸಮುದಾಯವಾಗಿದೆ. ಸುಮಾರು 1400 ವರ್ಷ ಕಳೆದರೂ ಒಂದಕ್ಷರ ವ್ಯತ್ಯಾಸವಿಲ್ಲದೆ ಪವಿತ್ರ ಕುರ್‌ಆನ್ ನಮ್ಮ ಕೈಯಲ್ಲಿದೆ. ಆದರೆ ಮಾನವರ ಮಾರ್ಗದರ್ಶನಕ್ಕಾಗಿ ಬಂದ ಜೀವನದ ಸಕಲ ರಂಗಗಳಿಗೂ ಮಾರ್ಗದರ್ಶಕವಾದ ಪವಿತ್ರ ಗ್ರಂಥ ಕೈಯಲ್ಲಿದ್ದೂ ಅದನ್ನು ಅರಿಯುವುದರಲ್ಲಿ ಸಮುದಾಯ ಸೋತು ಹೋಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಓದಲ್ಪಡುವ ಗ್ರಂಥ ಪವಿತ್ರ ಕುರ್‌ಆನ್ ಆಗಿದೆ ಎಂದು ಇಕ್ರಾ ಅರಬಿಕ್ ಕಾಲೇಜಿನ ಅಧ್ಯಾಪಕ ಫರ್ಹಾನ್ ನದ್ವಿ ಹೇಳಿದರು.
ಜಮಾಅತೆ ಇಸ್ಲಾಮೀ ಹಿಂದ್ ರಾಷ್ರೀಯ ಅಭಿಯಾನ ‘ಕುರ್‌ಆನ್‌ನೆಡೆಗೆ ಮರಳಿರಿ’ ಅಭಿಯಾನದ ಪ್ರಯುಕ್ತ ಉಳ್ಳಾಲ ಶಾಖೆಯ ವತಿಯಿಂದ ತೊಕ್ಕೊಟ್ಟಿನ ಮಸ್ಜಿದುಲ್ ಹುದಾದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉಳ್ಳಾಲ ಶಾಖೆಯ ಅಧ್ಯಕ್ಷ ಅಬ್ದುಲ್ ಕರೀಮ್ ಸ್ವಾಗತಿಸಿದರು. ಮಹ್ಫೂಝುರ‌್ರಹ್ಮಾನ್ ರಿಯಾದ್ ಹಾಗೂ ಇಲ್ಯಾಸ್ ಇಸ್ಮಾಯೀಲ್ ಮಾತನಾಡಿದರು. ಸೋಲಿಡಾರಿಟಿ ಜಿಲ್ಲಾ ಕಾರ್ಯದರ್ಶಿ ನಿಝಾಮುದ್ದೀನ್ ಕಾರ್ಯಕ್ರಮ ನಿರೂಪಿಸಿದರು.
Next Story