ಮಂಗಳೂರು: ಅನುಮಾನಾಸ್ಪದ ವ್ಯಕ್ತಿಯ ಸೆರೆ
ಮಂಗಳೂರು, ಅ.20: ನಗರದ ಕದ್ರಿ ಮೈದಾನದ ಕೋರ್ದಬ್ಬು ದೈವಸ್ಥಾನನ ಬಳಿ ಗುರುವಾರ ಮುಂಜಾನೆ ವೇಳೆಗೆ ಗಸ್ತು ನಿರತ ಎಸ್ಸೈ ಚಂದ್ರಶೇಖರ್‌ರ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದ ಕೇರಳದ ಆಲೆಪ್ಪಿ ಜಿಲ್ಲೆಯ ಕಡಕರಪಳ್ಳಿ ಚೋರ್ ತಾಳ ಗ್ರಾಮದ ಪೇರುವಾಲಿ ಹೌಸ್ ನಿವಾಸಿ ಪಿ.ಎಸ್. ಬೈಜು ಯಾನೆ ಕುಂಬಾರಿ ಬೈಜು ಎಂಬಾತನನ್ನು ಸಂಶಯದ ಮೇಲೆ ಬಂಧಿಸಿ ಕಾನೂನು ಕ್ರಮ ಜರಗಿಸಲಾಗಿದೆ.
ಆರೋಪಿಯು ತನ್ನ ಇರುವಿಕೆಯನ್ನು ಮರೆಮಾಚಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ವಿಚಾರಿಸಿದಾಗ ಸಮರ್ಪಕ ಉತ್ತರ ನೀಡಲಿಲ್ಲ. ಯಾವುದೋ ದುಷ್ಕೃತ್ಯ ನಡೆಸುವ ಉದ್ದೇಶದಿಂದ ಹೊಂಚು ಹಾಕುತ್ತಿರುವ ಬಗ್ಗೆ ಆತನ ವರ್ತನೆಯಿಂದ ಸಂಶಯ ಬಂದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ.
Next Story