ಗ್ರೆಗೋರಿ ವಿಲಿಯಂ ವಾಜ್
ಮಂಗಳೂರು, ಅ.27: ಮಂಗಳೂರು ಕ್ರೈಸ್ತ ಧರ್ಮ ಪ್ರಾಂತದ ಹಿರಿಯ ಧರ್ಮಗುರುಗಳಾಗಿದ್ದ ರೆ.ಫಾ. ಗ್ರೆಗೋರಿ ವಿಲಿಯಂ ವಾಜ್ (81) ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.
ಬಂಟ್ವಾಳ ತಾಲೂಕಿನ ಅಗ್ರಾರ್‌ನ ಜೋಸೆಫ್ ವಾಜ್ ಮತ್ತು ಪಿ.ವಾಜ್ ಅವರ ಪುತ್ರನಾಗಿ 1941ರ ಮೇ 25ರಂದು ಜನಿಸಿದ್ದ ಗ್ರೆಗೋರಿ ವಿಲಿಯಂ ವಾಜ್ 1966ರಲ್ಲಿ ಧರ್ಮಗುರುಗಳಾಗಿ ದೀಕ್ಷೆ ಪಡೆದಿದ್ದರು.
ಮಿಲಾಗ್ರಿಸ್ ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಆರಂಭಿಸಿದ್ದ ಅವರು ಪುತ್ತೂರು, ಕುಲಶೇಖರ, ಪಾಲ್ದನೆ ಚರ್ಚ್‌ಗಳಲ್ಲಿಯೂ ಧರ್ಮಗುರುಗಳಾಗಿ ಕಾರ್ಯನಿರ್ವಹಿಸಿದ್ದರು. ಮಂಗಳೂರು ಮಿಲಾಗ್ರಿಸ್ ಶಾಲಾ ಮುಖ್ಯಸ್ಥರಾಗಿ, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 2018ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.
ಮೃತ ರೆ.ಫಾ. ಗ್ರೆಗೋರಿ ವಿಲಿಯಂ ವಾಜ್ ಅವರ ಅಂತಿಮ ಸಂಸ್ಕಾರವು ಅ.28ರಂದು ಅಪರಾಹ್ನ 3.30ಕ್ಕೆ ವೆಲೆನ್ಸಿಯಾದ ಸಂತ ವಿನ್ಸೆಂಟ್ ಫೇರಾರ್ ಚರ್ಚ್‌ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
Next Story