'ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ...': ಪುನೀತ್ ರಾಜ್ ಕುಮಾರ್ ಮಾಡಿದ್ದ ಟ್ವೀಟ್ ವೈರಲ್
ಬೆಂಗಳೂರು: 'ಗಂಧದಗುಡಿ' ಸಿನೆಮಾದ ಕುರಿತಂತೆ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪುನೀತ್ ರಾಜ್‌ಕುಮಾರ್ ಅಭಿನಯದ PRK ಪ್ರೊಡಕ್ಷನ್ಸ್ ನಡಿ, ‘ವೈಲ್ಡ್ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಅವರ ಜೊತೆಗೂಡಿ ನಟ ಡಾಕ್ಯೂಫಿಲಂ ‘ಗಂಧದಗುಡಿ’ ನಾಳೆ(ಅ.28) ಕನ್ನಡ ಸೇರಿದಂತೆ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ತೆರೆಕಾಣುತ್ತಿದೆ. ಈ ನಡುವೆ ಪುನೀತ್ ಅವರ ಟ್ವಿಟರ್ ಖಾತೆಯಿಂದ ''ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ... Looking forward to see you all in the theaters'' ಎಂದು ಬರೆದು, ಜೊತೆಗೆ ಹಾರ್ಟ್ ಸಿಂಬಲ್ ಹಾಕಿ ಟ್ವೀಟ್ ಮಾಡಲಾಗಿದೆ. ಪುನೀತ್ ಅವರ ಖಾತೆಗಳಿಂದ ಪೋಸ್ಟ್ ಅಪ್‌ಲೋಡ್ ಆಗಿರುವುದನ್ನು ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ.
''ಒಂದು ಕ್ಷಣ ಪುನೀತ್ ರಾಜ್‌ಕುಮಾರ್ ಅವರೇ ವಾಪಸ್ ಬಂದಂಗೆ ಆಯ್ತು'' ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
''ಈ ಖಾತೆಯಿಂದ ಟ್ವೀಟ್ ಬರುತ್ತದೆ ಅಂತ ನಾವು ಊಹಿಸಿಯೇ ಇರಲಿಲ್ಲ''., ''ನಾವೂ ಕೂಡ ನಿಮ್ಮನ್ನು ನೋಡುವ ಕಾತುರದಲ್ಲಿದ್ದೇವೆ'' ಎಂದು ಹಲವರು ಸಂತಸ ವ್ಯಕ್ತಪಡಿಸಿ, ಪ್ರತಿಕ್ರಿಯಿಸಿದ್ದಾರೆ.
‘ಗಂಧದಗುಡಿ’ ಟೀಸರ್ ಬಿಡುಗಡೆ ಬಗ್ಗೆ ಟ್ವಿಟರ್ ನಲ್ಲಿ ಪುನೀತ್ ಅವರು ಅ.27ರಂದು ಪೋಸ್ಟ್ ಮಾಡಿದ್ದರು. ಬಳಿಕ ನಿಧನರಾಗುವುದಕ್ಕೂ ಮುನ್ನ ಅಂದರೆ 2021ರ ಅಕ್ಟೋಬರ್ 29ರಂದು 'ಭಜರಂಗಿ 2' ಚಿತ್ರಕ್ಕೆ ಶುಭ ಕೋರಿ ಟ್ವೀಟ್ ಮಾಡಿದ್ದರು. ಆ ಬಳಿಕ ಅವರ ಟ್ವಿಟರ್ ಖಾತೆಯಿಂದ ಯಾವುದೇ ಪೋಸ್ಟ್ ಮಾಡಲಾಗಿರಲಿಲ್ಲ. ಇದೀಗ ವರ್ಷದ ಬಳಿಕ @PuneethRajkumar ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ...
— Puneeth Rajkumar (@PuneethRajkumar) October 27, 2022
Looking forward to see you all in the theaters ❤️
- Team PRK#GandhadaGudi @Ashwini_PRK #Amoghavarsha @PRK_Productions @PRKAudio @AJANEESHB #Mudskipper @pratheek_dbf @KRG_Studios @KRG_Connects #GGMovie #PowerInU pic.twitter.com/9gEwyGCzIT
See you in Theatre Appu Sir #Gandhadagudi
— $AcH!n (@SachinkM69) October 27, 2022
ಒಂದ್ ಸೆಕೆಂಡ್ ಬಾಸೆ ಪೋಸ್ಟ್ ಹಾಕಿದ್ರು ಅನ್ಕೊಂಡೆ...!
— Pradeep K (@pradeep_avru) October 27, 2022
Miss u appu .. we are waiting too..
— Sowmya Pawar97 (@SPawar97) October 27, 2022