ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ್ಸಿಂಗ್ ಪುತ್ರ ಮಹೇಂದ್ರಸಿಂಗ್ ವಘೇಲಾ ಕಾಂಗ್ರೆಸ್ ಸೇರ್ಪಡೆ
ಅಹ್ಮದಾಬಾದ್: ಗುಜರಾತ್ ನ ಮಾಜಿ ಮುಖ್ಯಮಂತ್ರಿ ಶಂಕರ್ಸಿಂಗ್ ವಘೇಲಾ ಅವರ ಪುತ್ರ ಮಹೇಂದ್ರಸಿಂಗ್ ವಘೇಲಾ (Mahendrasinh Vaghela) ಇಂದು ಕಾಂಗ್ರೆಸ್ಗೆ (Congress) ಸೇರಿದ್ದಾರೆ.
ಶುಕ್ರವಾರ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರಾದ ಜಗದೀಶ್ ಠಾಕೂರ್ ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಂತರ ಮಾತನಾಡಿದ ಅವರು, "ಬಿಜೆಪಿಯಲ್ಲಿ ನಾನು ಎಂದಿಗೂ ಆರಾಮದಾಯಕವಾಗಿರಲಿಲ್ಲ. ಕಳೆದ ಐದು ವರ್ಷಗಳಲ್ಲಿ ಬಿಜೆಪಿಯ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ. ಈಗ ನಾನು ಕಾಂಗ್ರೆಸ್ಗೆ ಮರಳಿದ್ದು, ಪಕ್ಷಕ್ಕಾಗಿ ದುಡಿಯುತ್ತೇನೆ. ಪಕ್ಷ ಯಾವ ಹುದ್ದೆ ನೀಡಿದರೂ ಅದನ್ನು ಶ್ರದ್ಧೆಯಿಂದ ನಿಭಾಯಿಸುತ್ತೇನೆ" ಎಂದು ಮಹೇಂದ್ರಸಿಂಗ್ ಹೇಳಿದ್ದಾರೆ.
"ನಾನು ಸುಮಾರು 27 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಮತ್ತೊಮ್ಮೆ ಪಕ್ಷದ ನಾಯಕರೊಂದಿಗೆ ದುಡಿಯುತ್ತೇನೆ" ಎಂದು ವಘೇಲಾ ಹೇಳಿದ್ದಾರೆ.
2017ರ ವಿಧಾನಸಭೆ ಚುನಾವಣೆಗೂ ಮುನ್ನ ಮಹೇಂದ್ರಸಿಂಗ್ ವಘೇಲಾ ಅವರು ಕಾಂಗ್ರೆಸ್ ತೊರೆದಿದ್ದರು.