ದ.ಕ.ಜಿಲ್ಲೆಯ ಗ್ರಾಪಂ ಉಪಚುನಾವಣೆ: ಫಲಿತಾಂಶ ಪ್ರಕಟ
ಮಂಗಳೂರು: ದ.ಕ.ಜಿಲ್ಲೆಯ ನಾಲ್ಕು ಗ್ರಾಪಂಗಳ ನಾಲ್ಕು ವಾರ್ಡ್‌ಗಳಿಗೆ ಅ.28ರಂದು ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿವೆ.
ಮಂಗಳೂರು ತಾಲೂಕಿನ ಗಂಜಿಮಠ ಗ್ರಾಪಂನ ಬಡಗುಳಿಪಾಡಿ ಗ್ರಾಮದ 3ನೇ ವಾರ್ಡ್‌ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆರ್.ಎಸ್. ಇರ್ಫಾನ್ 523 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಗ್ರಾಪಂ ಸದಸ್ಯರಾಗಿದ್ದ ಆರ್.ಎಸ್.ಝಾಕಿರ್‌ರ ನಿಧನದ ಹಿನ್ನೆಲೆಯಲ್ಲಿ ಝಾಕಿರ್‌ರ ಸಹೋದರ ಇರ್ಫಾನ್ ಸ್ಪರ್ಧಿಸಿದ್ದರು.
ಮಂಗಳೂರು ತಾಲೂಕಿನ ಎಕ್ಕಾರು ಗ್ರಾಪಂನ ತೆಂಕ ಎಕ್ಕಾರು 3ನೆ ವಾರ್ಡ್‌ನಲ್ಲಿ ಮೊಯ್ದಿನ್ ಖಾನ್, ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ದೇವಸ್ಯಪಡೂರು 1ನೆ ವಾರ್ಡ್‌ನಲ್ಲಿ ಅಪ್ಪಿ, ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಪಂನ ಸುಬ್ರಹ್ಮಣ್ಯ 3ನೆ ವಾರ್ಡ್‌ನಲ್ಲಿ ರಾಜೇಶ್ ಎನ್.ಎಸ್. ಗೆಲುವು ಸಾಧಿಸಿದ್ದಾರೆ.
Next Story