ದೇರಳಕಟ್ಟೆ: ಕೆ.ಎಚ್. ಹುಸೈನ್ ಕುಂಞಿ ಹಾಜಿ ಅನುಸ್ಮರಣಾ ಕಾರ್ಯಕ್ರಮ
ದೇರಳಕಟ್ಟೆ: ಸಮಸ್ತ ಕೇರಳ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಮತ್ತು ಸಮಸ್ತ ಕೇರಳ ಜಂ-ಇಯ್ಯತುಲ್ ಮುಅಲ್ಲಿಮೀನ್ ಕಿನ್ಯ ಹಾಗು ದೇರಳಕಟ್ಟೆ ರೇಂಜ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಮದರಸ ಮ್ಯಾನೇಜ್ಮೆಂಟ್ ಮಾಜಿ ಅಧ್ಯಕ್ಷರಾಗಿದ್ದ ಕೆ.ಎಚ್. ಹುಸೈನ್ ಕುಂಞಿ ಹಾಜಿ ಅವರ ಅನುಸ್ಮರಣಾ ಕಾರ್ಯಕ್ರಮ ನಾಟೆಕಲ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮ್ಯಾನೇಜ್ಮೆಂಟಿನ ಅಧ್ಯಕ್ಷರಾದ ಕೆ.ಎಸ್ ಅಬ್ದುಲ್ ಖಾದರ್ ಹಾಜಿ ವಹಿಸಿದ್ದರು.
ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಖಾಝಿಯೂ, ದಾರುನ್ನೂರು ವಿದ್ಯಾಸಂಸ್ಥೆಯ ಶೈಖುನಾ ತ್ವಾಖಾ ಅಹಮದ್ ಮುಸ್ಲಿಯಾರ್ ಅಲ್ ಅಝ್ಹರಿ, ಹುಸೈನ್ ಕುಂಞಿ ಹಾಜಿ ಸಮಸ್ತ ಮತ್ತು ಮ್ಯಾನೇಜ್ಮೆಂಟ್ ಗಾಗಿ ಸಲ್ಲಿಸಿದ ಸೇವೆಯನ್ನು ಕೊಂಡಾಡಿ ಅವರ ಮಗ್ಫಿರತ್ ಮತ್ತು ಮರ್ಹಮತ್ ಗಾಗಿ ದುಆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಶಾಸಕರೂ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕರಾದ ಯು ಟಿ ಖಾದರ್, ಜಾತ್ಯತೀತ ಜನತಾದಳದ ರಾಜ್ಯ ನಾಯಕರಾದ ಅಬೂಬಕ್ಕರ್ ಹಾಜಿ ನಾಟೆಕಲ್, ದೇರಳಕಟ್ಟೆ ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ಇಸ್ಹಾಕ್ ಫೈಝಿ , ಹುಸೈನ್ ಕುಂಞಿ ಹಾಜಿ ಅವರ ಪುತ್ರ ಕೆ.ಸಿ.ಇಸ್ಮಾಯಿಲ್ ಹಾಜಿ, ಕಿನ್ಯ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ದಾರಿಮಿ ರೆಂಜಾಡಿ, ತಬೂಕ್ ದಾರಿಮಿ, ಯೂಸುಫ್ ಹಾಜಿ ಮತ್ತು ಎಸ್ಕೆಎಸ್ಎಸ್ಎಫ್ ದೇರಳಕಟ್ಟೆ ವಲಯ ಅಧ್ಯಕ್ಷರಾದ ಫಾರೂಕ್ ದಾರಿಮಿ ಮೊದಲಾದವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಹುಸೈನ್ ಕುಂಞಿ ಹಾಜಿಯವರು ಸಂಸ್ಥೆಗೆ ಸಲ್ಲಿಸಿರುವ ಸೇವೆಯನ್ನು ಸ್ಮರಿಸಿ ಅವರಿಗೆ ತಹ್ಲೀಲ್ ಸಮರ್ಪಿಸಿ ದುಅ ನೆರವೇರಿಸಲಾಯಿತು. ಕಿನ್ಯ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ನ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಫೈಝಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮದರಸ ಮ್ಯಾನೇಜ್ಮೆಂಟ್ ಕೋಶಾಧಿಕಾರಿ ಮೊಹಿದ್ದೀನ್ ಬಾವು ಮರಾಠಿಮೂಲೆ, ಉಪಾಧ್ಯಕ್ಷರಾದ ಅಶ್ರಫ್ ಮರಾಠಿಮೂಲೆ, ಕಾರ್ಯದರ್ಶಿ ಸಿ.ಎಂ.ಶರೀಫ್ ಪಟ್ಟೋರಿ, ವರ್ಕಿಂಗ್ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಎಸ್.ಬಿ. ಹಾಗೂ ವಿವಿಧ ಜಮಾಅತುಗಳ ಅಧ್ಯಕ್ಷರು, ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ಕೊಣಾಜೆ ಸ್ವಾಗತಿಸಿದರೆ, ದೇರಳಕಟ್ಟೆ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಇದರ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ದಾರಿಮಿ ವಂದಿಸಿದರು.