ಅರ್ನಾಲ್ಡ್ ಡಿಸಿಲ್ವ
ಉಡುಪಿ, ನ.1: ನಗರದ ಮದರ್ ಕೇರ್ ಮಳಿಗೆಯ ಮಾಲಕ ಅರ್ನಾಲ್ಡ್ ಡಿಸಿಲ್ವ (70) ಹೃದಯಾಘಾತದಿಂದ ಇಂದು ಸಂಜೆ ನಿಧನರಾದರು.
ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾದ ಇವರು, ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಸುಮಾರು 32 ವರ್ಷಗಳಿಂದ ಉಡುಪಿ ಸೂಪರ್ ಬಝಾರ್‌ನ ಮದರ್ ಕೇರ್‌ನ ಸಂಸ್ಥೆಯನ್ನು ಮುನ್ನಡೆಸುತ್ತಿದ್ದರು.
ಇವರು ಕಟಪಾಡಿ ಫ್ರೆಂಡ್ಸ್, ಗೆಳೆಯರ ಬಳಗ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಮಾತ್ರವಲ್ಲದೆ ತುಳು, ಕೊಂಕಣಿ ನಾಟಕಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತಿದ್ದರು. ಮೃತರು ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ.
Next Story