ಕೊರೋನ ತಲ್ಲಣ
ಈ ‘ಕೊರೋನ ತಲ್ಲಣ’ ಕೃತಿಯಲ್ಲಿ ಡಾ.ಕೆ.ಪಿ.ಮಹಾಲಿಂಗು ಕಲ್ಕುಂದ ಅವರು ಕಳೆದ ಎರಡು ವರ್ಷಗಳಲ್ಲಿ ಕೊರೋನ ನೆಪದಲ್ಲಿ ನಡೆದ ಘಟನಾವಳಿಗಳನ್ನು ಸವಿವರವಾಗಿ ದಾಖಲಿಸಿದ್ದಾರೆ. ಕೊರೋನ ಸೋಂಕಿನ ಬಗ್ಗೆ, ಅದಕ್ಕಾಗಿ ಹಲವು ದೇಶಗಳಲ್ಲಿ ಮಾಡಲಾದ ಲಾಕ್‌ಡೌನ್ ಬಗ್ಗೆ, ಭಾರತದಲ್ಲಿ ಮಾಡಿದ ಲಾಕ್‌ಡೌನ್ ಬಗ್ಗೆ ಮತ್ತು ಅದರಿಂದಾಗಿ ಜನಜೀವನದಲ್ಲಾದ ಕಷ್ಟನಷ್ಟಗಳ ಬಗ್ಗೆ, ವಲಸೆ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ಮತ್ತಿತರರಿಗಾದ ಬವಣೆಗಳ ಬಗ್ಗೆ ಮನ ಮುಟ್ಟುವಂತೆ ಬರೆದಿದ್ದಾರೆ. ಕೊರೋನ ಕಾಲದ ಬಗ್ಗೆ ಬಹಳಷ್ಟು ಮಾಹಿತಿಯನ್ನು ಸಂಗ್ರಹಿಸಿ ಈ ಕೃತಿಯನ್ನು ರಚಿಸುವುದಕ್ಕೆ ಲೇಖಕರು ಸಾಕಷ್ಟು ಶ್ರಮವನ್ನೂ, ಸಮಯವನ್ನೂ ವ್ಯಯಿಸಿದ್ದಾರೆನ್ನುವುದು ಇಲ್ಲ್‌ನ ಪ್ರತೀ ಪುಟದಲ್ಲೂ ಗೋಚರಿಸುತ್ತದೆ.
ಜ್ಞಾನ ಮತ್ತು ಮಾಹಿತಿಗಳ ಮಹಾಪೂರದ ಈ ಕಾಲದಲ್ಲಿ, ಸಣ್ಣ ವಿಷಯದ ಬಗ್ಗೆಯೂ ವಿಶೇಷ ತಜ್ಞರನ್ನು ಹೊಂದಿರುವ ಈ ಕಾಲದಲ್ಲಿ, ಕೊರೋನ ಸೋಂಕಿನಂಥ ಒಂದು ವೈದ್ಯಕೀಯ ವಿಷಯದ ಬಗ್ಗೆ, ಅದರಲ್ಲೂ ಹೊಸದಾಗಿ ಗುರುತಿಸಲಾದ ವೈರಾಣುವಿನ ಬಗ್ಗೆ ಅರಿತು, ಸರಿಯಾಗಿ ಅರ್ಥೈಸಿಕೊಳ್ಳುವುದು ಸುಲಭದ ಕೆಲಸವಲ್ಲ. ಇಡೀ ವಿಶ್ವದ ವೈದ್ಯಕೀಯ ಲೋಕವೇ ತಡಬಡಾಯಿಸಿರುವಾಗ ರಾಜಕಾರಣಿಗಳೂ, ಮಾಧ್ಯಮಗಳೂ ತಮಗೆ ತೋಚಿದ್ದೇ ಸರಿ ಎಂಬಂತೆ ವರ್ತಿಸಿರುವಾಗ, ಅದು ಇನ್ನಷ್ಟು ಕಷ್ಟವೂ, ಗೊಂದಲಮಯವೂ ಆಗಿರುತ್ತದೆ. ಅಂಥ ಸನ್ನಿವೇಶದಲ್ಲಿ ಲೇಖಕರು ಸ್ತುತ್ಯರ್ಹವಾದ ಕೆಲಸವನ್ನೇ ಮಾಡಿದ್ದಾರೆ.
(ಮುನ್ನುಡಿಯಿಂದ)
ಪುಸ್ತಕ: ಕೊರೋನ ತಲ್ಲಣ
ಲೇಖಕರು:
ಡಾ. ಕೆ.ಪಿ. ಮಹಾಲಿಂಗು ಕಲ್ಕುಂದ
ಪ್ರಕಾಶಕರು: ಚಳವಳಿ ಪ್ರಕಾಶನ, ನಂ.
5188/2, ವಿ.ಎ. ಲೇಔಟ್, ಕೆಎಚ್‌ಬಿ ಕಾಲನಿ ಹಿಂಭಾಗ, ದೇವೀರಮ್ಮನ ಹಳ್ಳಿ ಬಡಾವಣೆ, ನಂಜನಗೂಡು-571301
ಬೆಲೆ: 180 ರೂ.
ಮೊ: 9972526647