varthabharthi


ನಿಧನ

ಗಣೇಶ ಕಿಣಿ

ವಾರ್ತಾ ಭಾರತಿ : 15 Nov, 2022

ಕುಂದಾಪುರ : ಕುಂದಾಪುರದ ಚರ್ಚರಸ್ತೆ ನಿವಾಸಿ, ಉದ್ಯಮಿ ಹಾಗೂ ಸಮಾಜ ಸೇವಕ ಗಣೇಶ್ ಕಿಣಿ (63) ಮಂಗಳವಾರ ಹ್ರೃದಯಾಘಾತದಿಂದ ನಿಧನರಾದರು. ಇವರು ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. 

ತಮ್ಮ ಸಳ ನಡೆ ನುಡಿ,ಸೇವಾ ಗುಣಗಳಿಂದ ಜನಸಾಮಾನ್ಯರಿಂದ  ಗೌರವ ಪಡೆಯುತ್ತಿದ್ದ ಗಣೇಶ ಕಿಣಿ ತಮ್ಮ ಹರಿಕೃಪಾ ಏಜೆನ್ಸೀಸ್ ಮೂಲಕ ಪ್ರಸಿದ್ದ ಕಂಪೆನಿಗಳ ಸಿದ್ಧ ಆಹಾರ ವಸ್ತುಗಳ ವಿತರಣೆ ನಡೆಸುತ್ತಿದ್ದು ವ್ಯಾಪಾರಿ ವಲಯದಲ್ಲಿ ಜನಾನುರಾಗಿಯಾಗಿದ್ದರು. ಕುಂದಾಪುರ ಪೇಟೆ ಶ್ರೀವೆಂಕಟರಮಣ ದೇವಾಲಯದ ಎಲ್ಲಾ ಕಾರ್ಯಗಳಲ್ಲೂ ಸ್ವಯಂಸೇವಕರಾಗಿ ಶ್ರಮಿಸುತ್ತಿದ್ದರು.

ಇವರ ಅಂತ್ಯಕ್ರಿಯೆ ಬುಧವಾರ ಬೆಳಗ್ಗೆ 9.30ಕ್ಕೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)