ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ 'ಹಿಂದೂ' : ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ಹೊಸದಿಲ್ಲಿ: ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು 'ಹಿಂದೂ' ಹಾಗೂ ಎಲ್ಲಾ ಭಾರತೀಯರ ಡಿಎನ್ಎ ಒಂದೇ ಆಗಿರುತ್ತದೆ ಮತ್ತು ಅವರ ಆಚರಣೆಗಳನ್ನು ಯಾರೂ ಬದಲಾಯಿಸುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ RSS Chief Mohan Bhagwat ಮಂಗಳವಾರ ಪ್ರತಿಪಾದಿಸಿದರು.
ಛತ್ತೀಸ್ಗಢದ ಸುರ್ಗುಜಾ ಜಿಲ್ಲೆಯ ಪ್ರಧಾನ ಕಛೇರಿಯಾದ ಅಂಬಿಕಾಪುರದಲ್ಲಿ ಸ್ವಯಂಸೇವಕರ (ಸಂಘದ ಸ್ವಯಂಸೇವಕರು) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ವೈವಿಧ್ಯತೆಯಲ್ಲಿ ಏಕತೆಯನ್ನು ಭಾರತದ ಪುರಾತನ ವೈಶಿಷ್ಟ್ಯವೆಂದು ಪದೇ ಪದೇ ಎತ್ತಿ ತೋರಿಸಿದರು ಹಾಗೂ ಹಿಂದುತ್ವವು ಎಲ್ಲರನ್ನು ಕರೆದುಕೊಂಡು ಹೋಗುವುದನ್ನು ನಂಬುವ ವಿಶ್ವದ ಏಕೈಕ ಕಲ್ಪನೆಯಾಗಿದೆ ಎಂದು ಹೇಳಿದರು.
“ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ಹಿಂದೂಗಳು ಎಂದು 1925 ರಿಂದ (ಆರೆಸ್ಸೆಸ್ ಸ್ಥಾಪನೆ) ನಾವು ಹೇಳುತ್ತಿದ್ದೇವೆ. ಭಾರತವನ್ನು ತಮ್ಮ 'ಮಾತೃಭೂಮಿ' ಎಂದು ಪರಿಗಣಿಸುವವರು ಹಾಗೂ ವಿವಿಧತೆಯಲ್ಲಿ ಏಕತೆಯ ಸಂಸ್ಕೃತಿಯೊಂದಿಗೆ ಬದುಕಲು ಬಯಸುತ್ತಾರೆ ಹಾಗೂ ಈ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡುತ್ತಾರೆ’’ಎಂದು ಭಾಗವತ್ ಹೇಳಿದರು.