varthabharthi


ಸಿನಿಮಾ

ಹಿರಿಯ ನಟಿ, ನಿರೂಪಕಿ ತಬಸ್ಸುಮ್‌ ಗೋವಿಲ್‌ ನಿಧನ

ವಾರ್ತಾ ಭಾರತಿ : 19 Nov, 2022


Tabassum Govil (Twitter)
 

ಮುಂಬೈ: ಹಿರಿಯ ನಟಿ ತಬಸ್ಸುಮ್ ಗೋವಿಲ್ ಅವರು ನವೆಂಬರ್ 18 ರಂದು ಹೃದಯ ಸ್ತಂಭನದಿಂದ ತಮ್ಮ 78 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದ್ದಾರೆ. ನಟಿಯ ನಿಧನದ ಸುದ್ದಿಯನ್ನು ಅವರ ಪುತ್ರ ಹೋಶಾಂಗ್ ಗೋವಿಲ್ ಅವರು ನವೆಂಬರ್ 19 ರಂದು ಬಹಿರಂಗಪಡಿಸಿದ್ದಾರೆ.

ಬೇಬಿ ತಬಸ್ಸುಮ್ ಎಂದು ಜನಪ್ರಿಯಗೊಂಡಿರುವ ತಬಸ್ಸುಮ್ 1947 ರಲ್ಲಿ ಬಾಲನಟಿಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ನರ್ಗೀಸ್ (1947), ಮೇರಾ ಸುಹಾಗ್ (1947), ಮಂಜಧರ್ (1947), ಬರಿ ಬೆಹೆನ್ (1949), ದೀದಾರ್ ಮುಂತಾದ ಚಲನಚಿತ್ರಗಳಲ್ಲಿ ನಟಿಸುವುದರ ಜೊತೆಗೆ ತಬಸ್ಸುಮ್ 1972 ರಿಂದ 1993 ರವರೆಗೆ ಜನಪ್ರಿಯ ದೂರದರ್ಶನ ಸೆಲೆಬ್ರಿಟಿ ಟಾಕ್ ಶೋ “ಫೂಲ್ ಖಿಲೆ ಹೈ ಗುಲ್ಶನ್ ಗುಲ್ಶನ್” ನಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)