ಉತ್ತರಪ್ರದೇಶ: ಯುವತಿಯ ಮೃತದೇಹವಿದ್ದ ಸೂಟ್ಕೇಸ್ ಪತ್ತೆ
ಲಕ್ನೋ (ಉತ್ತರಪ್ರದೇಶ), ನ. 19: ಮಥುರಾ ಜಿಲ್ಲೆಯ ಯಮುನಾ ಎಕ್ಸ್ಪ್ರೆಸ್ವೇಯಲ್ಲಿ ಶುಕ್ರವಾರ ಯುವತಿಯ ಮೃತದೇಹ ಇದ್ದ ಸೂಟ್ಕೇಸ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾರಿಹೋಕರಿಂದ ನಾವು ಈ ಮಾಹಿತಿ ಸ್ವೀಕರಿಸಿದೆವು. ಸೂಟ್ಕೇಸ್ನಲ್ಲಿದ್ದ ಯುವತಿಯ ಮೃತದೇಹ ಕೊಳೆತಿಲ್ಲ. ಆದುದರಿಂದ ಯುವತಿಯ ಮೃತದೇಹವಿದ್ದ ಸೂಟ್ಕೇಸ್ ಅನ್ನು ಹಿಂದಿನ ದಿನ ಇಲ್ಲಿ ಇರಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯ ವಯಸ್ಸು 20 ಇರಬಹುದು. ಮೃತದೇಹವನ್ನು ಪ್ಲಾಸ್ಟಿಕ್ನಲ್ಲಿ ಸುತ್ತಿ ದೊಡ್ಡ ಕೆಂಪು ಸೂಟ್ಕೇಸ್ನಲ್ಲಿ ಇರಿಸಲಾಗಿದೆ. ಮೃತದೇಹದ ಮುಖ ಹಾಗೂ ತಲೆಯಲ್ಲಿ ರಕ್ತ ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ.
ಯುವತಿಯ ಹೆಗಲಿನ ಗಾಯ ಗುಂಡು ತಗುಲಿ ಆಗಿದೆ ಎಂದು ಸಂದೇಹಿಸಲಾಗಿದೆ. ಅದು ಗುಂಡು ತಗುಲಿ ಆದ ಗಾಯವೇ? ಅಲ್ಲವೇ? ಎಂಬುದನ್ನು ನಾವು ಮರಣೋತ್ತರ ಪರೀಕ್ಷೆಯ ಮೂಲಕ ಪತ್ತೆ ಹಚ್ಚಲಿದ್ದೇವೆ ಎಂದು ಸರ್ಕಲ್ ಅಧಿಕಾರಿ ಮಹಾವನ್ ಅಲೋಕ್ ಸಿಂಗ್ ಅವರು ತಿಳಿಸಿದ್ದಾರೆ.
ಯುವತಿಯ ಮೃತದೇಹದೊಂದಿಗೆ ಯಾವುದೇ ಗುರುತು ಕಾರ್ಡ್ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.