varthabharthi


ಕ್ರೀಡೆ

ಫಿಫಾ ವಿಶ್ವಕಪ್: ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಕತರ್‌ ವಿರುದ್ಧ ಈಕ್ವೆಡಾರ್ ಗೆ ಜಯ

ವಾರ್ತಾ ಭಾರತಿ : 20 Nov, 2022

Photo: Twitter/@FIFAWorldCup

ದೋಹಾ: ಹಲವಾರು ವೈಶಿಷ್ಟ್ಯತೆಗಳೊಂದಿಗೆ ಆರಂಭವಾಗಿರುವ ಕತರ್‌ ನ ಫಿಫಾ ವಿಶ್ವಕಪ್‌ ಪಂದ್ಯಾಕೂಟದ ಮೊದಲ ಪಂದ್ಯದಲ್ಲಿ ಆತಿಥೇಯ ಕತರ್‌ ತಂಡದ ವಿರುದ್ಧ ಈಕ್ವೆಡಾರ್ ಜಯ ಸಾಧಿಸಿದೆ. 2-0 ಗೋಲುಗಳ ಮೂಲಕ ಈಕ್ವೆಡಾರ್ ತಂಡವು ಪಂದ್ಯಾಕೂಟದಲ್ಲಿನ ನಾಗಾಲೋಟಕ್ಕೆ ಅಂಕುಶವಿಟ್ಟಿದೆ. 

ಮೊದಲಾರ್ಧದಲ್ಲಿ 16 ನೇ ಹಾಗೂ 31 ನೇ ನಿಮಿಷ ಗೋಲು ಬಾರಿಸಿದ ಈಕ್ವೆಡಾರ್ ತಂಡದ ಎನೆರ್‌ ವೆಲೆನ್ಸಿಯಾ ಪಂದ್ಯಾಟದ ತಾರೆಯಾಗಿ ಹೊರಹೊಮ್ಮಿದರು. ದ್ವಿತೀಯಾರ್ಧದಲ್ಲಿ ಇತ್ತಂಡಗಳೂ ಗೋಲು ಗಳಿಸುವಲ್ಲಿ ವಿಫಲಗೊಂಡಿತು. ಗ್ರೂಪ್‌ ಎ ನಲ್ಲಿ ಈಕ್ವೆಡಾರ್., ನೆದರ್ಲೆಂಡ್‌, ಸೆನೆಗಲ್‌ ಹಾಗೂ ಕತರ್‌ ತಂಡಗಳಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)