varthabharthi


ಗಲ್ಫ್ ಸುದ್ದಿ

ಮರ್ಕಝುಲ್ ಹುದಾ ಕುಂಬ್ರ: ಜುಬೈಲ್ ಸಮಿತಿಗೆ ನೂತನ ಸಾರಥ್ಯ

ವಾರ್ತಾ ಭಾರತಿ : 21 Nov, 2022

ಅಬ್ದುಲ್ ಹಮೀದ್ ಅರಮೆಕ್ಸ್ / ಮುಹಮ್ಮದ್ ರಫೀಖ್ ಸೂರಿಂಜೆ / ನಿಸಾರ್ ಗೂಡಿನಬಳಿ

ಜುಬೈಲ್: ಪುತ್ತೂರು -ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಇದರ ಸೌದಿ ಅರೇಬಿಯಾ ಜುಬೈಲ್ ಘಟಕದ ಮಹಾಭೆಯು ಇತ್ತೀಚೆಗೆ ಜುಬೈಲ್ ಕೆಸಿಎಫ್ ಭವನದಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಡಾ. ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಸಖಾಫಿ ಝೈನೀ ಕಾಮಿಲ್ ಅವರ ಅಧ್ಯಕ್ಷತೆಯಲ್ಲಿ ನಡದು ನೂತನ ಸಮಿತಿಯನ್ನು ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಮುಹಮ್ಮದ್ ಅಲಿ ಉಪ್ಪಿನಂಗಡಿ, ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಅರಮೆಕ್ಸ್ ಉಳ್ಳಾಲ, ಪ್ರಧಾನ ಕಾರ್ಯದರ್ಶಿಯಾಗಿ  ಮುಹಮ್ಮದ್ ರಫೀಖ್ ಸೂರಿಂಜೆ,ಕೋಶಾಧಿಕಾರಿಯಾಗಿ ನಿಸಾರ್ ಗೂಡಿನಬಳಿ ಇವರನ್ನು ಆರಿಸಲಾಯಿತು,

ಉಪಾಧ್ಯಕ್ಷರಾಗಿ ಅಬ್ದುಲ್ ಅಝೀಝ್ ಸ‌ಅದಿ ಕುಡ್ತಮೊಗೆರು, ಇಸ್ಮಾಯಿಲ್ ಮುಸ್ಲಿಯಾರ್ ಉಡುಪಿ, ಕಾರ್ಯದರ್ಶಿಯಾಗಿ ತೌಫೀರ್ ಬೋಂದೆಲ್, ಸಂವಹನ ಕಾರ್ಯದರ್ಶಿಯಾಗಿ ಮುಹಮ್ಮದ್ ಅಲಿ ಕನ್ಯಾನ, ಕಾರ್ಯಕಾರಿ ಸದಸ್ಯರಾಗಿ ಶಾಫಿ ಕಾವೂರು,ಸಮೀರ್ ಕುದ್ರೋಳಿ,ಫಹದ್ ಉಳ್ಳಾಲ,ಅಝೀಝ್ ತುಂಬೆ,ಹಾಗೂ ಸಲಹಾ ಸಮಿತಿಯ  ಸದಸ್ಯರಾಗಿ ಫಾರೂಖ್ ಕನ್ಯಾನ, ಶಂಸುದ್ದೀನ್ ಬೈರಿಕಟ್ಟೆ, ಖಮರುದ್ದೀನ್ ಗೂಡಿನಬಳಿ,ಆಸಿಫ್ ಗೂಡಿನಬಳಿ, ನಸೀರ್ ಗೂಡಿನಬಳಿ ಇವರನ್ನು ಆಯ್ಕೆ ಮಾಡಲಾಯಿತು.

ಸಮಾರಂಭದಲ್ಲಿ ಶಂಸುದ್ದೀನ್ ಬೈರಿಕಟ್ಟೆ ಅಧ್ಯಕ್ಷತೆ ವಹಿಸಿದರು. ಕೆಸಿಎಫ್ ಅಂತಾರಾಷ್ಟ್ರೀಯ ನಾಯಕ ಖಮರುದ್ದೀನ್ ಗೂಡಿನಬಳಿ ಉದ್ಘಾಟಿಸಿದರು.

ಮರ್ಕಝುಲ್ ಹುದಾ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಮುಹಮ್ಮದ್ ಫಾರೂಖ್ ಕನ್ಯಾನ, ಬಶೀರ್ ಇಂದ್ರಾಜೆ, ಕೆಸಿಎಫ್ ಜುಬೈಲ್ ಝೋನ್ ಅಧ್ಯಕ್ಷ ಅಝೀಝ್ ಸ‌ಅದಿ, ಡಿಕೆಎಸ್ಸಿ ಸಂಚಾಲಕ ಇಸ್ಮಾಯಿಲ್ ಮುಸ್ಲಿಯಾರ್ ಶುಭ ಹಾರೈಸಿದರು.

ಅಬ್ದುಲ್ ಹಮೀದ್ ಅರಮೆಕ್ಸ್ ಸ್ವಾಗತಿಸಿದರು. ರಫೀಖ್ ಸೂರಿಂಜೆ ಧನ್ಯವಾದ ಸಲ್ಲಿಸಿದರು. ಸಂಚಾಲಕ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)