varthabharthi


ರಾಷ್ಟ್ರೀಯ

ಮೇಘಾಲಯದ ಗ್ರಾಮಸ್ಥರ ಮೇಲೆ ಅಸ್ಸಾಂ ಪೊಲೀಸರಿಂದ ಗುಂಡಿನ ದಾಳಿ: 6 ಮಂದಿ ಮೃತಪಟ್ಟಿದ್ದಾರೆಂದ ಸಿಎಂ ಸಂಗ್ಮಾ

ವಾರ್ತಾ ಭಾರತಿ : 22 Nov, 2022

ಜೈನ್ತಿಯಾ ಹಿಲ್ಸ್: ಮೇಘಾಲಯದ ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಮುಕ್ರೋಹ್ ಗ್ರಾಮದಲ್ಲಿ ಮಂಗಳವಾರ ಅಸ್ಸಾಂ ಪೊಲೀಸರು ಗುಂಡು ಹಾರಿಸಿದ ನಂತರ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಹೇಳಿದ್ದಾರೆ. ಮೃತಪಟ್ಟವರಲ್ಲಿ ಐವರು ಮೇಘಾಲಯದ ನಿವಾಸಿಗಳಾಗಿದ್ದರೆ, ಒಬ್ಬರು ಅಸ್ಸಾಂ ಫಾರೆಸ್ಟ್ ಗಾರ್ಡ್‌ನ ಅಧಿಕಾರಿಯಾಗಿದ್ದಾರೆ ಎಂದು ಅವರು ಹೇಳಿದರು.

ಅಸ್ಸಾಂ ಪೊಲೀಸರು ಮತ್ತು ಅಸ್ಸಾಂ ಅರಣ್ಯ ಸಿಬ್ಬಂದಿ ತಮ್ಮ ರಾಜ್ಯದಿಂದ ಮರವನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಮುಕ್ರೋಹ್ ಗ್ರಾಮದಲ್ಲಿ ಬಂಧಿಸುವ ಮೊದಲು ಹಿಂಬಾಲಿಸಿದ ನಂತರ ಗುಂಡಿನ ದಾಳಿ ನಡೆದಿದೆ ಎಂದು ಮೇಘಾಲಯ ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಟ್ರಕ್ ನಿಲ್ಲಿಸಿರುವುದನ್ನು ಪ್ರಶ್ನಿಸಿದ ಗ್ರಾಮಸ್ಥರು ಅಸ್ಸಾಂ ಅಧಿಕಾರಿಗಳಿಗೆ ಘೇರಾವ್ ಮಾಡಿದ ನಂತರ ಹಿಂಸಾಚಾರ ಭುಗಿಲೆದ್ದಿತು ಎಂದು ಸಂಗ್ಮಾ ಹೇಳಿದರು.

ಘಟನೆಯ ನಂತರ, ಪಶ್ಚಿಮ ಜಾಂಟಿಯಾ ಹಿಲ್ಸ್, ಈಸ್ಟ್ ಜಾಂಟಿಯಾ ಹಿಲ್ಸ್, ಈಸ್ಟ್ ಖಾಸಿ ಹಿಲ್ಸ್, ಈಸ್ಟರ್ನ್ ವೆಸ್ಟ್ ಖಾಸಿ ಹಿಲ್ಸ್, ವೆಸ್ಟ್ ಖಾಸಿ ಹಿಲ್ಸ್, ನೈಋತ್ಯ ಖಾಸಿ ಹಿಲ್ಸ್ ಮತ್ತು ರಿ ಭೋಯ್ ಸೇರಿದಂತೆ ಏಳು ಮೇಘಾಲಯ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು 48 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)