ಅಕ್ರಮ ಹಣ ವರ್ಗಾವಣೆ ಆರೋಪ: ಈಡಿ ವಿಶೇಷ ನ್ಯಾಯಾಲಯಕ್ಕೆ ಡಿಕೆಶಿ ಹಾಜರು
ಹೊಸದಿಲ್ಲಿ, ನ.23: ನ್ಯಾಷನಲ್‍ಹೆರಾಲ್ಡ್ ಪ್ರಕರಣ ಸಂಬಂಧ ಹೊಸದಿಲ್ಲಿಯ ವಿಶೇಷ ಈಡಿ ಕೋರ್ಟ್ ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಜರಾದರು ಎಂದು ವರದಿಯಾಗಿದೆ.
2019ರಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ಡಿಕೆಶಿ ಮನೆ ಮೇಲೆ ದಾಳಿ ನಡೆಸಿದ್ದರು. ನಂತರ ಎರಡೂವರೆ ವರ್ಷದ ಬಳಿಕೆ ಆರೋಪ ಪಟ್ಟಿ ತಯಾರಿಸಿದ ಈಡಿ ಅಧಿಕಾರಿಗಳು, ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.
''ಪ್ರಕರಣದಲ್ಲಿ ಮುಚ್ಚಿಡಲು ಏನೂ ಇಲ್ಲ. ದತ್ತಿ ಕೆಲಸಕ್ಕಾಗಿ ಹಣ ನೀಡಿದ್ದೇವೆ. ಈ ಬಗ್ಗೆಸೂಕ್ತ ಉತ್ತರ ನೀಡಲಾಗುವುದು'' ಎಂದು ಈ ಹಿಂದೆ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದರು.
Next Story