varthabharthi


ಅಂತಾರಾಷ್ಟ್ರೀಯ

ಪ್ರಿಯಕರನ ಮನೆಗೆ ಬೆಂಕಿ ಇಟ್ಟ ಯುವತಿ: ಕಾರಣ ಏನು ಗೊತ್ತೇ?

ವಾರ್ತಾ ಭಾರತಿ : 24 Nov, 2022

ಟೆಕ್ಸಾಸ್: ತಾನು ಪ್ರಿಯಕರನಿಗೆ ಮಾಡಿದ ದೂರವಾಣಿ ಕರೆಯನ್ನು ಮತ್ತೊಬ್ಬ ಮಹಿಳೆ ಸ್ವೀಕರಿಸಿದ್ದರಿಂದ ಕೋಪಗೊಂಡ ಯುವತಿಯೊಬ್ಬಳು ತನ್ನ ಪ್ರಿಯಕರನ ಮನೆಯ ಅಮೂಲ್ಯ ವಸ್ತುಗಳನ್ನು ಕಳವು ಮಾಡಿ ಬಳಿಕ ಮನೆಗೆ ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ.

ಈ ಸಂಬಂಧ ಟೆಕ್ಸಾಸ್ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಬಕ್ಸರ್ ಕಂಟ್ರಿ ಶೆರೀಫ್ ಕಚೇರಿ ಹೇಳಿದೆ.

ಸೆನಾಡಿಯಾ ಮೇರಿ ಸೊಟೊ (23) ಎಂಬ ಯುವತಿ ರಾತ್ರಿ 2 ಗಂಟೆಯ ಸುಮಾರಿಗೆ ತನ್ನ ಪ್ರಿಯಕರನ ಮನೆಯ ಬೀಗ ಮುರಿದು ಒಳಹೋಗಿ ಈ ಕೃತ್ಯ ಎಸಗಿದ್ದಾಳೆ. ಮನೆಗಳ್ಳತನ ಮತ್ತು ದೊಂಬಿ ಆರೋಪದಲ್ಲಿ ಸೊಟೊ ಎಂಬಾಕೆಯನ್ನು ಬಂಧಿಸಲಾಗಿದೆ ಎಂದು ಫೇಸ್‍ಬುಕ್‍ನಲ್ಲಿ ಪೊಲೀಸರು ಪ್ರಕಟಣೆ ನೀಡಿದ್ದಾರೆ.

ಸೊಟೊ ಮಾಡಿದ ಕರೆಯನ್ನು ಸ್ವೀಕರಿಸಿದ ಮಹಿಳೆ, ಪ್ರಿಯಕರನ ಸಂಬಂಧಿ ಎನ್ನುವುದು ಆ ಬಳಿಕ ತಿಳಿದು ಬಂದಿದೆ. ಮತ್ಸರ ಹಾಗೂ ಸಿಟ್ಟಿನಿಂದ ಮಹಿಳೆ ಮನೆಯ ಕಪಾಟಿಗೆ ಬೆಂಕಿ ಹಚ್ಚಿದ್ದಾಳೆ. ಇದು ಇಡೀ ಮನೆಯನ್ನು ಸುಟ್ಟುಹಾಕಿದೆ. ಮನೆ ಹೊತ್ತಿ ಉರಿಯುವ ವೀಡಿಯೊವನ್ನು ಚಿತ್ರೀಕರಿಸಲಾಗಿದ್ದು, ಘಟನೆಯಲ್ಲಿ 50 ಸಾವಿರ ಡಾಲರ್‌ ನಷ್ಟು ಹಾನಿಯಾಗಿದೆ ಎಂದು ಪ್ರಕಟಣೆ ವಿವರಿಸಿದೆ. ಈ ಬಗ್ಗೆ ndtv.com ವರದಿ ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು