ರಮೇಶ್ ಜಾರಕಿಹೊಳಿಗೆ ಬಿಜೆಪಿಯಲ್ಲಿ ಒಳ್ಳೆಯ ಭವಿಷ್ಯ ಇದೆ: ಶಾಸಕ ಯತ್ನಾಳ್
ಧಾರವಾಡ, ನ.24: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಜೆಡಿಎಸ್ ಸೇರ್ಪಡೆಯಾಗಿತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಮೇಶ್ ಜಾರಕಿಹೊಳಿ ಜೆಡಿಎಸ್ ಗೆ ಹೋಗುವುದಿಲ್ಲ, ಆ ವಿಶ್ವಾಸ ನನಗಿದೆ. ಆದಷ್ಟು ಬೇಗ ಅವರು ಮಂತ್ರಿ ಆಗ್ತಾರೆ, ಅವರ ಭವಿಷ್ಯ ಬಿಜೆಪಿಯಲ್ಲಿದೆ, ಬಿಜೆಪಿ ಬಿಟ್ಟರೆ ಜೆಡಿಎಸ್ ನಿಂದ ಏನಾಗುತ್ತೆ?'' ಎಂದು ಪ್ರಶ್ನೆ ಮಾಡಿದರು.
''ಮುಂದೆ ಮಂತ್ರಿ ಮಂಡಳ ವಿಸ್ತರಣೆ ಆಗುತ್ತೆ, ಅದರಲ್ಲಿ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗುತ್ತದೆ ಎಂದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ'' ಎಂದು ಸ್ಪಷ್ಟಪಡಿಸಿದರು.
ಮಂಗಳೂರಿನ ಆಟೋ ರಿಕ್ಷಾ ಸ್ಫೋಟ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ''ಪ್ರಕರಣದ ತನಿಖೆಯಲ್ಲಿ ಯಾವುದೇ ವೈಫಲ್ಯ ಆಗಿಲ್ಲ, ಹಿಂದೂ ಹೆಸರು ತೆಗೆದುಕೊಂಡು ಮೋಸ ಮಾಡಿದ್ದಾರೆ. ಈಗಾಗಲೇ ತನಿಖೆ ಆಗುತ್ತಿದ್ದು, ಅಂಥವರ ಮೇಲೆ ಕ್ರಮ ಆಗಿಯೇ ಆಗುತ್ತದೆ'' ಎಂದು ತಿಳಿಸಿದರು.