varthabharthi


ಕ್ರೀಡೆ

ಜರ್ಮನಿ ವಿರುದ್ಧ ಐತಿಹಾಸಿಕ ವಿಜಯದ ನಂತರ ಲಾಕರ್ ರೂಮ್ ಸ್ವಚ್ಛಗೊಳಿಸಿ ಎಲ್ಲರ ಹೃದಯ ಗೆದ್ದ ಜಪಾನ್ ಆಟಗಾರರು

ವಾರ್ತಾ ಭಾರತಿ : 24 Nov, 2022

Photo: twitter

ದೋಹಾ: ಖತರ್‌ನಲ್ಲಿ ಬುಧವಾರ ನಡೆದ 2022 ರ ವಿಶ್ವಕಪ್ ಗುಂಪು ಹಂತದ ಪಂದ್ಯದಲ್ಲಿ ಜರ್ಮನಿ ವಿರುದ್ಧ ಜಪಾನ್ ಐತಿಹಾಸಿಕ ಮೊದಲ ಗೆಲುವು ಸಾಧಿಸಿತು. ಜಪಾನ್ ತಂಡದ  ಈ ಸಾಧನೆಗೆ ವ್ಯಾಪಕ ಸಂಭ್ರಮಾಚರಣೆಯೂ ಕಂಡುಬಂದಿತು. ಆದಾಗ್ಯೂ, ವಿಶ್ವದ ಶ್ರೇಷ್ಠ ಆಟಗಾರರೆಂದು ಎಂದು ಹೆಸರುವಾಸಿಯಾಗಿರುವ ಜಪಾನ್ ತಂಡವು ತಮ್ಮ ನಂಬಲಾಗದ ನಡವಳಿಕೆಯ  ಮೂಲಕ ಮತ್ತೊಮ್ಮೆ ಸಾಮಾಜಿಕ ಮಾಧ್ಯಮ ಬಳಕೆದಾರರ ಹೃದಯವನ್ನು ಗೆದ್ದಿದೆ.

ಗೆಲುವನ್ನು ಸಂಭ್ರಮಿಸುವ ಬದಲು ಜಪಾನ್ ಆಟಗಾರರು  ತಮ್ಮ ಲಾಕರ್ ಕೋಣೆಯನ್ನು ಸ್ವಚ್ಛಗೊಳಿಸಿದರು.

ಲಾಕರ್ ರೂಮ್  ಚಿತ್ರವನ್ನು ಹಂಚಿಕೊಂಡ FIFA, " #FIFAWorldCup ನ 4ನೇ ದಿನದಂದು ಜರ್ಮನಿ ವಿರುದ್ಧ ಐತಿಹಾಸಿಕ ವಿಜಯದ ನಂತರ ಜಪಾನ್ ಫುಟ್ಬಾಲ್ ಅಭಿಮಾನಿಗಳು ಕ್ರೀಡಾಂಗಣದಲ್ಲಿದ್ದ ಕಸವನ್ನು ಸ್ವಚ್ಛಗೊಳಿಸಿದ್ದರು, ಆದರೆ ಜಪಾನ್ ಫುಟ್ಬಾಲ್ ಆಟಗಾರರು  ಖಲೀಫ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ತಮ್ಮ ಚೇಜಿಂಗ್  ರೂಮ್ ಇಷ್ಟೊಂದು ಸ್ವಚ್ಛವಾಗಿಟ್ಟು ಹೋಗಿದ್ದಾರೆ’’ ಎಂದು ಬರೆದಿದೆ. '

ಕೋಣೆಯ ಮಧ್ಯಭಾಗದಲ್ಲಿರುವ ಕೌಂಟರ್‌ನಲ್ಲಿ ಟವೆಲ್‌ಗಳು, ನೀರಿನ ಬಾಟಲಿಗಳನ್ನು ಅಂದವಾಗಿ  ಜೋಡಿಸಿಡಲಾಗಿದೆ. ಅಷ್ಟೇ ಅಲ್ಲ, ಜಪಾನೀಸ್ ತಂಡವು ಜಪಾನೀಸ್ ಹಾಗೂ  ಅರೇಬಿಕ್ ಭಾಷೆಗಳಲ್ಲಿ "ಧನ್ಯವಾದಗಳು" ಎಂದು ಬರೆದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು